ನವದೆಹಲಿ: ಚೀನಾ ಪರವಾಗಿ ನಿಂತು ಭಾರತದ ವಿರುದ್ಧ ವಿನಾಕಾರಣ ಧ್ವೇಷ ಕಾರಿದ ನೇಪಾಳ ಪ್ರಧಾನಿ ಕೆಪಿ ಒಲಿ ರಾಜೀನಾಮೆಗೆ ಅವರ ಸ್ವಪಕ್ಷೀಯರೇ ಪಟ್ಟು ಹಿಡಿದಿದ್ದಾರೆ.
ಆಡಳಿತದ ಎಲ್ಲಾ ವಿಭಾಗಗಳಲ್ಲಿ ವಿಫಲಗೊಂಡಿರುವ ಕೆಪಿ ಒಲಿ ಚೀನಾ ಜತೆ ಸೇರಿಕೊಂಡು ಸ್ನೇಹ ರಾಷ್ಟ್ರವಾಗಿದ್ದ ಭಾರತದ ವಿರುದ್ಧ ಕತ್ತಿ ಮಸೆಯಲು ಮುಂದಾಗಿದ್ದರು. ಇದು ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದೆ.
ಈಗ ಮಾಜಿ ಪ್ರಧಾನಿ ಪುಷ್ಪಕುಮಾರ್ ದಹಾಲ್ ನೇತೃತ್ವದಲ್ಲಿ ದಂಗೆ ಎದ್ದಿರುವ ಆಡಳಿತಾರೂಢ ಎನ್ ಸಿಪಿ ನಾಯಕರು ಕೆಪಿ ಒಲಿ ಪದಚ್ಯುತಿಗೆ ತೆರೆ ಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಕೂಡಾ ಒಲಿ ರಾಜೀನಾಮೆ ನೀಡಬೇಕು ಎಂದು ಎಚ್ಚರಿಸಿದ್ದಾರೆ.