ನವದೆಹಲಿ: ಏನಾದರೂ ಸರಿಯೇ, ಹೇಗಾದರೂ ಸರಿಯೇ ಭಾರತಕ್ಕೆ ಪೆಟ್ಟು ನೀಡಲು ಕಾಯುತ್ತಿರುವ ಚೀನಾ ಈಗ ಅದಕ್ಕಾಗಿ ಉಗ್ರರ ಜತೆ ಕೈ ಜೋಡಿಸಲೂ ತಯಾರಾಗಿದೆ.
ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ತಾನ ಈಗ ಚೀನಾ ಜತೆ ಕೈ ಜೋಡಿಸಿದೆ. ಉತ್ತರ ಲಡಾಖ್ ಕಡೆಗೆ ತನ್ನ ಸೇನೆ ನಿಯೋಜಿಸುತ್ತಿರುವ ಪಾಕಿಸ್ತಾನ ಚೀನಾಗೆ ತೆರೆಮರೆಯಲ್ಲೇ ಸಹಾಯ ಮಾಡುತ್ತಿದೆ.
ಇನ್ನೊಂದೆಡೆ ಚೀನಾ ಪಾಕ್ ಪ್ರೇರಿತ ಉಗ್ರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಲು ಪಿತೂರಿ ನಡೆಸಿದೆ ಎನ್ನಲಾಗಿದೆ. ಇದರ ಭಾಗವಾಗಿ ಪಾಕಿಸ್ತಾನದ ಐಎಸ್ಐ ಭಾರತಕ್ಕೆ ಉಗ್ರರನ್ನು ರವಾನಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ.