ನವದೆಹಲಿ: ಭಾರತ ಮತ್ತು ನೇಪಾಳದ ಇಷ್ಟು ವರ್ಷಗಳ ಸ್ನೇಹ ಸಂಬಂಧಕ್ಕೆ ಚೀನಾ ಕುತಂತ್ರದಿಂದಾಗಿ ಹುಳಿ ಹಿಂಡಿದ ನೇಪಾಳ ಪ್ರಧಾನಿ ಕೆಪಿ ಒಲಿ ಇಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಅವರ ತಪ್ಪು ರಾಜನೀತಿಯ ಬಗ್ಗೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು. ಮಾಜಿ ಪ್ರಧಾನಿ ಪುಷ್ಪಕುಮಾರ್ ದಹಾಲ್ ನೇತೃತ್ವದ ಬಣ ಅವರ ರಾಜೀನಾಮೆಗೆ ಪಟ್ಟು ಹಿಡಿದಿತ್ತು.
ಇದೀಗ ಬೇರೆ ದಾರಿ ಕಾಣದೇ ಒಲಿ ರಾಜೀನಾಮೆಗೆ ಮುಂದಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ಒಲಿ ಈ ಸಂದರ್ಭದಲ್ಲಿ ರಾಜೀನಾಮೆ ಘೋಷಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ.