ನವದೆಹಲಿ: ಒಂದೆಡೆ ಚೀನಾ ಗಡಿಯಲ್ಲಿ ತಗಾದೆ ತೆಗೆಯುತ್ತಿದ್ದರೆ ಇನ್ನೊಂದೆಡೆ ನೇಪಾಳ ಭಾರತದ ಆಕ್ಷೇಪದ ನಡುವೆಯೂ ವಿವಾದಿತ ಭೂ ಪ್ರದೇಶ ತನ್ನದು ಎಂಬ ಹೊಸ ನಕ್ಷೆಗೆ ತನ್ನ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆ.
ನೇಪಾಳ ಪ್ರಧಾನಿ ಕೆಪಿ ಒಲಿ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಹೊಸ ನಕ್ಷೆಗೆ ಸಂಬಂಧಿಸಿದಂತೆ ಮಂಡಿಸಿದ ಬಿಲ್ ಪಾಸ್ ಮಾಡಿಸಿಕೊಂಡಿದೆ. ವಿಶೇಷವೆಂದರೆ ಎಲ್ಲಾ ಸಂಸದರೂ ಈ ಮಸೂದೆ ಪರ ಮತ ಹಾಕಿದ್ದಾರೆ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಹಿಂದೆ ಚೀನಾ ಕುಮ್ಮಕ್ಕು ಇದೆ ಎಂದು ಭಾರತ ಆರೋಪಿಸಿದೆ.