ನೆರೆಯ ಶತ್ರುರಾಷ್ಟ್ರವಾದ ಭಾರತದೊಂದಿಗೆ ಮೈತ್ರಿಗೆ ಮುಂದಾಗಿದ್ದರಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಮುಂಬೈ ಉಗ್ರರ ದಾಳಿ ರೂವಾರಿ ಹಫೀಜ್ ಸಯೀದ್ ಹೇಳಿದ್ದಾನೆ.
11 ತಿಂಗಳುಗಳ ಕಾಲ ಗೃಹ ಬಂಧನದಲ್ಲಿದ್ದು ಇಂದು ಬೆಳಿಗ್ಗೆ ಗೃಹಬಂಧನದಿಂದ ಬಿಡುಗಡೆಗೊಂಡ ಹಫೀಜ್, ಪ್ರಾರ್ಥನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಬಂಧಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತಿರುಗೇಟು ನೀಡಿದ್ದಾನೆ.
ನವಾಜ್ ಷರೀಫ್ ಪ್ರಧಾನಿಯಾಗಿದ್ದಾಗ ಜನವೆರಿಯಿಂದ ಗೃಹಬಂಧನದಲ್ಲಿದ್ದ ಹಫೀಜ್, ಪ್ರಧಾನಿ ಮೋದಿಯೊಂದಿಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಮೈತ್ರಿಗೆ ಮುಂದಾಗಿದ್ದರಿಂದ ಅವರನ್ನು ಪ್ರಧಾನಿ ಸ್ಥಾನದಿಂದ ಕಿತ್ತುಹಾಕಬೇಕಾದ ಅನಿವಾರ್ಯತೆಯಿತ್ತು ಎಂದು ತಿಳಿಸಿದ್ದಾನೆ.
ಸಾವಿರಾರು ಮುಸ್ಲಿಮರನ್ನು ಕೊಂದ ಪ್ರಧಾನಿ ಮೋದಿಯೊಂದಿಗೆ ಷರೀಫ್ ಆತ್ಮಿಯ ಗೆಳೆಯರಾಗಲು ಪ್ರಯತ್ನಿಸುತ್ತಿದ್ದರಿಂದ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಬೊಗಳಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.