ಲಂಡನ್ : ಶಸ್ತ್ರಾಸ್ತ್ರ ಪೂರೈಸುವ ಮೂಲಕ ಹಿಂದಿನಿಂದ ಉಕ್ರೇನ್ ಬೆಂಬಲಕೊಂಡುತ್ತಿರುವ ನ್ಯಾಟೋ ಪಡೆಗಳು, ನೇರವಾಗಿ ರಷ್ಯಾವನ್ನು ಎದಿರುಹಾಕಿಕೊಳ್ಳಲು ಮತ್ತೆ ಹಿಂದೇಟು ಹಾಕಿದೆ.
ರಷ್ಯಾ ಮತ್ತು ಉಕ್ರೇನ್ ದಾಳಿ ಇಂದಿಗೆ 10ನೇ ದಿನಕ್ಕೆ ಮುಟ್ಟಿದ್ದು, ಇಂದು 6 ಗಂಟೆಗಳ ಕಾಲ ರಷ್ಯಾ ಕದನ ವಿರಾಮವನ್ನು ಘೋಷಿಸಿತ್ತು. ಇಂದು ರಷ್ಯಾ ದಾಳಿ ತಡೆಯಲು ನೋ ಫ್ಲೈ ಜೋನ್ ಘೋಷಣೆ ಮಾಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾಡಿದ ಮನವಿಯನ್ನು ನ್ಯಾಟೋ ಪುರಸ್ಕರಿಸಿಲ್ಲ.
ನಾವು ನೋ ಫ್ಲೈ ಜೋನ್ ಎಂದು ಘೋಷಿಸಿದರೆ ಉಕ್ರೇನ್ಗೆ ನ್ಯಾಟೋ ಯುದ್ಧ ವಿಮಾನ ಕಳಿಸಿ ರಷ್ಯಾದ ವಿಮಾನ ತಡೆಯಬೇಕಾಗುತ್ತದೆ. ಇದು ನೇರವಾಗಿ ಯುದ್ಧಕ್ಕೆ ಧುಮುಕಿದಂತೆ.
ಇದು ಮೂರನೇ ಮಹಾಯುದ್ಧಕ್ಕೂ ನಾಂದಿ ಹಾಡಬಹುದು. ನಾವಿದಕ್ಕೆ ತಯಾರಿಲ್ಲ. ನಾವು ನೋ ಫ್ಲೈ ಜೋನ್ ಎಂದು ಘೋಷಿಸಲ್ಲ ಎಂದು ನ್ಯಾಟೋ ದೇಶಗಳು ಪ್ರಕಟಿಸಿವೆ.
ಈ ಪ್ರಕಟನೆ ಕೇಳಿ ಝೆಲೆನ್ಸ್ಕಿ ಗರಂ ಆಗಿದ್ದಾರೆ. ನ್ಯಾಟೋ ತೀರ್ಮಾನ ರಷ್ಯಾಗೆ ಇನ್ನಷ್ಟು ದಾಳಿ ಮಾಡಲು ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. ಇದನ್ನು ನ್ಯಾಟೋದಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಾನೇಲ್ಲೂ ಓಡಿಹೋಗಿಲ್ಲ. ಕೀವ್ನಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.