ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಗೊಂದಲದ ವೀಡಿಯೋದಲ್ಲಿ, ಈಜಿಪ್ಟಿನ ಸಲಾಫಿಸ್ಟ್ ಮೌಲ್ವಿ, ಮುಸ್ಲಿಂ ಪುರುಷರು ತಮ್ಮ ಪುತ್ರಿಯರನ್ನು ವಿವಾಹವಾಗಬಹುದು ಎಂದು ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣವಾಗಿದ್ದಾರೆ.
ಈಜಿಪ್ತ್ ದೇಶದ ಮೌಲ್ವಿ ಮಾಜೆನ್ ಅಲ್-ಸೆರ್ಸಾವಿ ಮಾತನಾಡಿ, ವಿವಾಹಕ್ಕೆ ಮುಂಚಿತವಾಗಿ ಜನಿಸಿದ ಪುತ್ರಿಯರನ್ನು ತಂದೆ ವಿವಾಹವಾಗಬಹುದು. ವಿವಾಹದ ನಂತರ ಜನಿಸಿದ್ದರೆ ಅಂತಹ ಪುತ್ರಿಯರನ್ನು ವಿವಾಹವಾಗುವಂತಿಲ್ಲ ಎಂದು ಬೊಗಳೆ ಬಿಟ್ಟಿದ್ದಾನೆ.
ಮೌಲ್ವಿ ಮಾಜೆನ್ ಅಲ್-ಸೆರ್ಸಾವಿ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದ್ದು, ದೇಶ ವಿದೇಶಗಳಿಂದ ಭಾರಿ ಟೀಕೆಗೆ ಗುರಿಯಾಗಿದ್ದಾನೆ. ವಿಡಿಯೋ 2012ರಲ್ಲಿ ಶೂಟ್ ಮಾಡಲಾಗಿದ್ದರೂ ಇದೀಗ ಬಿಡುಗಡೆಯಾಗಿದೆ.
ಮೌಲ್ವಿ ಹೇಳಿಕೆಯ ಪ್ರಕಾರ, ಮದುವೆಯಾಗದೆ ಹುಟ್ಟಿದ ಪುತ್ರಿ, ತಂದೆಗೆ "ನೈಜ ಮಗಳು" ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಶರಿಯಾ ಕಾನೂನುಗಳು ನ್ಯಾಯಸಮ್ಮತವಲ್ಲದ ಪುತ್ರಿಯರನ್ನು ತಂದೆ ವಿವಾಹವಾಗಬಹುದಾಗಿದೆ ಎಂದು ಹೇಳಿದ್ದಾನೆ.
ಮೌಲ್ವಿ ಮಾಜೆನ್ ಅಲ್-ಸೆರ್ಸಾವಿ ವಿಡಿಯೋಗೆ ಟ್ವಿಟ್ಟರ್‌ನಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದು, ಟ್ವಿಟ್ಟರಿಗರು ತೀವ್ರವಾಗಿ ಖಂಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.