ನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಬುರ್ಖಾ ಧರಿಸಿದ ಯುವತಿಯೊಬ್ಬಳು ತನ್ನ ಮುಸ್ಲಿಂ ಗೆಳೆತಿಯರೊಂದಿಗೆ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ ಹಿನ್ನೆಲೆಯಲ್ಲಿ ಮೂಲಭೂತವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಶಾಪಿಂಗ್ ಮಾಲ್‌ವೊಂದರಲ್ಲಿ ಬುರ್ಖಾ ಧರಿಸಿದ ಯವತಿ, ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಕೆಲ ಮುಸ್ಲಿಂ ಮೌಲ್ವಿಗಳು ಯುವತಿ ನೃತ್ಯ ವ್ಯಭಿಚಾರಕ್ಕೆ ಸಮವಾಗಿದೆ. ಇಸ್ಲಾಂ ಧರ್ಮಕ್ಕೆ ವಿರೋಧವಾಗಿದೆ ಎಂದು ಕಿಡಿಕಾರಿದ್ದಾರೆ.
ಇಸ್ಲಾಂ ಧರ್ಮದಲ್ಲಿ ನರ್ತನೆಗೆ ಅವಕಾಶವಿಲ್ಲ. ಆದ್ದರಿಂದ ಯುವತಿ ಮಾಡಿದರೂ ತಪ್ಪು, ಪುರುಷರು ಮಾಡಿದರೂ ತಪ್ಪೇ ಎಂದು ಧಾರ್ಮಿಕ ಮುಖಂಡ ಶಫೀ ಇಸ್ಮಾಯಿಲ್ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.