ಕಾರುಗಳ್ಳನೆಂದು ತಪ್ಪಾಗಿ ಭಾವಿಸಿ ಭಾರತೀಯ ವಿದ್ಯಾರ್ಥಿಗೆ ಗುಂಡಿಕ್ಕಿ ಕೊಂದಿರುವ ಘಟನೆ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾ ಕೌಂಟಿಯಲ್ಲಿ ನಡೆದಿದೆ. ತೆಲಂಗಾಣದ ವಾರಂಗಲ್ ಮೂಲದ 26 ವರ್ಷದ ವಂಶಿ ಚಂದ್ರಾರೆಡ್ಡಿ ಮೃತ ದುರ್ಧೈವಿ. ವಂಶಿ ಶನಿವಾರ ಬೆಳಗಿನ ಜಾವ ಪಾರ್ಟ್ ಟೈಮ್ ಕೆಲಸ ಮುಗಿಸಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
`ವಂಶಿ ನಾಪತ್ತೆಯಾಗಿರುವ ಬಗ್ಗೆ ಅವನ ಸ್ನೇಹಿತರು ನನಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ನನ್ನ ಮಗನನ್ನ ಪೊಲೀಸರು ಕೊಂದಿರುವುದಾಗಿ ತಿಳಿದು ಆಘಾತವಾಗಿದೆ’ ಎಂದು ವಂಶಿ ತಂದೆ ಸಂಜೀವ್ ರೆಡ್ಡಿ ಹೇಳಿದ್ದಾರೆ.
2013ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದ್ದ ವಂಶಿ ಸಿಲಿಕಾನ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ಮುಗಿಸಿ ಕೆಲಸ ಹುಡುಕುತ್ತಿದ್ದರು.