ಚೆನ್ನೈ: ಒಂದೆಡೆ ಶಾಸಕರ ಕೈ ತಪ್ಪಿ ಹೋಗುವ ಭಯ. ಇನ್ನೊಂದೆಡೆ ಏನೇ ಮಾಡಿದರೂ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡುವ ಸೂಚನೆ ಕಾಣುತ್ತಿಲ್ಲ. ಇದೆಲ್ಲದರಿಂದ ದಿಕ್ಕೆಟ್ಟಿರುವ ಶಶಿಕಲಾ ಪ್ರತಿಭಟನೆಯ ರೂಪದಲ್ಲಿ ಉಪವಾಸ ಸತ್ಯಾಗ್ರಹ ಕೂರಲಿದ್ದಾರೆಯೇ? ಹೀಗೊಂದು ಅನುಮಾನಗಳು ಮೂಡಿವೆ.
ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಕಾಯಬೇಕೆಂಬ ನಿಲುವಿಗೆ ರಾಜ್ಯಪಾಲ ಸಿ ವಿದ್ಯಾಸಾಗರ್ ರಾವ್ ಬದ್ಧರಾಗಿದ್ದಾರೆ. ಇದು ಶಶಿಕಲಾರನ್ನು ಕೆರಳಿಸಿದೆ. ಹೀಗಾಗಿ ರಾಜ್ಯಪಾಲರ ವಿರುದ್ಧವೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಅವರು ಉಪವಾಸ ಸತ್ಯಾಗ್ರಹ ಹೂಡಬಹುದು ಎಂದು ಮೂಲಗಳು ಹೇಳಿವೆ.
ಇನ್ನೊಂದೆಡೆ ಇಂದು ಮಧ್ಯಾಹ್ನ ಶಾಸಕರ ಭವನದಲ್ಲಿ ಸಭೆ ಸೇರುತ್ತಿರುವ ಹಂಗಾಮಿ ಮುಖ್ಯಮಂತ್ರಿ ಒ ಪನೀರ್ ಸೆಲ್ವಂಗಾಗಿ ಅವರ ಅಭಿಮಾನಿಗಳು ಸೆಕ್ರೆಟೇರಿಯೆಟ್ ಎದುರು ಕಾದು ಕುಳಿತಿದ್ದಾರೆ. ಈ ಸಭೆಯಲ್ಲಿ ಬೆಂಬಲಿಗರೊಂದಿಗೆ ಚರ್ಚಿಸಲಿರುವ ಸೆಲ್ವಂ ಶಶಿಕಲಾ ಬಣಕ್ಕೆ ವಿಶ್ವಾಸ ಮತ ಯಾಚಿಸಲು ಬೇಕಾದಷ್ಟು ಶಾಸಕರ ಬೆಂಬಲ ಸಿಗದಂತೆ ಮಾಡಲು ಎಲ್ಲಾ ಪ್ರಯತ್ನ ನಡೆಸಲಿರುವುದಂತೂ ಖಂಡಿತ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ