ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ್ ಗೆ ಬೆಚ್ಚಿ ಸೋತು ಹೋಗಿರುವ ಪಾಕಿಸ್ತಾನ ಈಗ ತನ್ನ ಸದಾ ಕಾಲದ ಮಿತ್ರ ಚೀನಾ ಬಳಿ ಹೋಗಲು ತೀರ್ಮಾನಿಸಿದೆ.
ಭಾರತದ ವಿರುದ್ಧ ದಾಳಿಗೆ ಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡಿತ್ತು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಭಾರತೀಯ ಸೇನೆಯ ಚಾಣಕ್ಷ್ಯತನಕ್ಕೆ ಚೀನಾದ ಯುದ್ಧ ಸಾಮಗ್ರಿಗಳು ನೆಲಕಚ್ಚಿದ್ದವು. ಅತ್ತ ಪಾಕಿಸ್ತಾನವೂ ಸಾಕಷ್ಟು ನಷ್ಟ ಅನುಭವಿಸಿತು.
ಇದರ ಬೆನ್ನಲ್ಲೇ ರಾಜತಾಂತ್ರಿಕವಾಗಿಯೂ ಭಾರತ ಈಗ ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ಒತ್ತಡ ಹಾಕಲು ಮುಂದಾಗಿದೆ. ಇದರ ಬೆನ್ನಲ್ಲೇ ಇಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಖ್ ದಾರ್ ಚೀನಾಗೆ ಭೇಟಿ ನೀಡಲಿದ್ದಾರೆ.
ಚೀನಾ ಭೇಟಿ ವೇಳೆ ರಕ್ಷಣೆ, ಪರಸ್ಪರ ಸಹಕಾರ ವಿಚಾರದಲ್ಲಿ ಚೀನಾ ಜೊತೆ ಮಾತುಕತೆ ನಡೆಸಲಿದ್ದಾರೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಖ್ ದಾರ್ ಮಾತುಕತೆ ನಡೆಸಲಿದ್ದು, ಭಾರತದ ದಾಳಿ ಬಗ್ಗೆ, ಸಂಕಷ್ಟದಲ್ಲಿರುವ ದೇಶಕ್ಕೆ ಸಹಾಯ ಬೇಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.