Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ 137ನೇ ಸ್ಥಾನ ಪಡೆದ ಭಾರತ

ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ 137ನೇ ಸ್ಥಾನ ಪಡೆದ ಭಾರತ
ಲಂಡನ್ , ಗುರುವಾರ, 7 ಜೂನ್ 2018 (14:05 IST)
ಲಂಡನ್: 2017ರ ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತ ನಾಲ್ಕು ಸ್ಥಾನಗಳ ಸುಧಾರಣೆ ಕಂಡಿರುವುದಾಗಿ ತಿಳಿದುಬಂದಿದೆ.


ಈ ಪಟ್ಟಿಯಲ್ಲಿ ಭಾರತ 137ನೇ ಸ್ಥಾನದಲ್ಲಿದೆ. 'ಕಾನೂನು ಸುವ್ಯವಸ್ಥೆ ಬಲಪಡಿಸಿರುವುದರಿಂದ ಹಿಂಸಾತ್ಮಕ ಅಪರಾಧಗಳ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ, 141ನೇ ಸ್ಥಾನದಲ್ಲಿದ್ದ ಭಾರತ ನಾಲ್ಕು ಸ್ಥಾನಗಳ ಸುಧಾರಣೆ ಕಂಡಿದೆ' ಎಂದು ಆಸ್ಟ್ರೇಲಿಯಾದ ಚಿಂತನ ಚಾವಡಿ ಹೇಳಿದೆ.


2008ರಿಂದಲೂ ಅತ್ಯಂತ ಶಾಂತಿಯುತ ರಾಷ್ಟ್ರವಾಗಿದ್ದ ಐಸ್‌ಲ್ಯಾಂಡ್ ಈಗಲೂ ಅದೇ ಸ್ಥಾನವನ್ನು ಕಾಪಾಡಿಕೊಂಡಿದೆ. ನ್ಯೂಜಿಲೆಂಡ್, ಆಸ್ಟ್ರಿಯಾ, ಪೋರ್ಚುಗಲ್ ಹಾಗೂ ಡೆನ್ಮಾರ್ಕ್ ನಂತರದ ಸ್ಥಾನಗಳಲ್ಲಿವೆ. ಶಾಂತಿ ಕಾಯ್ದುಕೊಳ್ಳುವಲ್ಲಿ ಅತ್ಯಂತ ಕೆಳಗಿರುವುದು ಸಿರಿಯಾ. ಇದು ಕಳೆದ ಐದು ವರ್ಷಗಳಿಂದಲೂ ಇದೇ ಸ್ಥಾನದಲ್ಲಿದೆ. ನಂತರದ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಅಫ್ಗಾನಿಸ್ತಾನ, ದಕ್ಷಿಣ ಸೂಡಾನ್‌, ಇರಾಕ್‌ ಮತ್ತು ಸೊಮಾಲಿಯಾ ಇವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಭವನದಲ್ಲಿ ಇಫ್ತಾರ್‌ ಕೂಟ ಆಚರಣೆ ರದ್ದು - ರಾಷ್ಟ್ರಪತಿ ರಾಮನಾಥ ಕೋವಿಂದ್‌