ನವದೆಹಲಿ: ಚೀನಾ ಜೊತೆ ಸೇರಿಕೊಂಡು ಮಸಲತ್ತು ಮಾಡಿದರೂ ಭಾರತ ಮಾತ್ರ ನೆರೆಯ ಮಾಲ್ಡೀವ್ಸ್ ದೇಶಕ್ಕೆ ನೀಡುವ ನೆರವು ನಿಲ್ಲಿಸಿಲ್ಲ.
ಇತ್ತೀಚೆಗೆ ಮಾಲ್ಡೀವ್ಸ್ ನಲ್ಲಿರುವ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಅಲ್ಲಿನ ಸರ್ಕಾರ ಆದೇಶಿಸಿತ್ತು. ಜೊತೆಗೆ ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಯನ್ನು ಅಲ್ಲಿನ ಸಚಿವರು ಅಣಕಿಸಿದ್ದರು. ಇದಾದ ಬಳಿಕ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಶುರುವಾಯಿತು. ಇದಾದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹಳಸಿತ್ತು.
ಹಾಗಿದ್ದರೂ ಭಾರತ ಮಾತ್ರ ನೆರೆಯ ರಾಷ್ಟ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯವನ್ನು ನಿಲ್ಲಿಸಿಲ್ಲ. ಮಾಲ್ಡೀವ್ಸ್ ನಲ್ಲಿ ಸುಮಾರು 771 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳಿಗೆ ಭಾರತ ಬಂಡವಾಳ ಹೂಡಿದೆ ಮತ್ತು ಅದನ್ನು ಈಗಲೂ ಮುಂದುವರಿಸಿದೆ. ಇದು ನೆರೆಯ ರಾಷ್ಟ್ರಕ್ಕೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ.
ಮಾಲ್ಡೀವ್ಸ್ ನಲ್ಲಿ ಸೇತುವೆ ನಿರ್ಮಾಣ, ಎರಡು ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಭಾರತ ಹಣಕಾಸಿನ ಸಹಾಯ ಮಾಡುತ್ತಿದೆ. ಅತ್ತ ಚೀನಾ ಜೊತೆ ಸೇರಿಕೊಂಡು ನಮ್ಮ ದೇಶದ ವಿರುದ್ಧವೇ ಮಾಲ್ಡೀವ್ಸ್ ಮಸಲತ್ತು ಮಾಡುತ್ತಿದ್ದರೂ ಭಾರತ ಮಾತ್ರ ಸಹಾಯ ನಿಲ್ಲಿಸಿಲ್ಲ.
ಭಾರತ ಇಷ್ಟೆಲ್ಲಾ ಸಹಾಯ ಮಾಡುತ್ತಿದ್ದರೂ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು ನಮ್ಮ ಶತ್ರು ರಾಷ್ಟ್ರವಾದ ಚೀನಾಕ್ಕೆ ಭೇಟಿ ನೀಡಿದೆಯಷ್ಟೇ ಹೊರತು ಭಾರತಕ್ಕೆ ಭೇಟಿ ನೀಡು ಧನ್ಯವಾದ ಸಲ್ಲಿಸುವ ಸೌಜನ್ಯವನ್ನೂ ತೋರಿಲ್ಲ. ಸಂಬಂಧ ಹಳಸಿದರೂ ಸದ್ಯಕ್ಕೆ ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.