ಕಳೆದ ಏಳೆಂಟು ದಿನಗಳಿಂದ ಭಾರತದ ರಾಜತಾಂತ್ರಿಕ ವ್ಯವಹಾರದಲ್ಲಿ ಅತ್ಯುತ್ತಮ ಸಾಧನೆ ಕಂಡಿದೆ. ಆಗಸ್ಟ್ 28ರಂದು ದೊಕ್ಲಾಮ್ ವಿವಾದ ಅಂತ್ಯ ಕಂಡು ಭಾರತ ಮತ್ತು ಚೀನಾ ರಾಷ್ಟ್ರಗಳು ಸೇನೆಯನ್ನ ಹಿಂಪಡೆದವು. ನಿನ್ನೆ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ದಮನ ಮತ್ತು ಅವುಗಳಿಗೆ ಬೆಂಬಲ ನೀಡುವವರ ವಿರುದ್ಧ ಹೋರಾಟ ನಡೆಸುವ ಒಮ್ಮತದ ನಿರ್ಧಾರ ಕೈಗೊಳ್ಳುವುದರೊಂದಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಪಾಕಿಸ್ತಾನದ ವಿರುದ್ಧ ಬಹುದೊಡ್ಡ ಜಯ ಸಾಧಿಸಿದರು.
ಇದೇವೇಳೆ, ಇವತ್ತು ಚೀನಾದ ಪ್ರಧಾನಿ ಕ್ಸಿ ಜಿನ್‍ಪಿಂಗ್ ಜೊತೆ ದೀರ್ಘಕಾಲದ ಬಳಿಕ ಪ್ರಧಾನಮಂತ್ರಿ ನರೇಂದ್ರಮೋದಿ ಮಾತುಕತೆ ನಡೆಸುತ್ತಿದ್ದಾರೆ. ಭಯೋತ್ಪಾದನೆ ಮಟ್ಟ ಹಾಕುವುದು, ವ್ಯಾಪಾರ ವಹಿವಾಟು ಮಾತುಕತೆಯ ಪ್ರಮುಖ ಅಜೆಂಡಾ ಎನ್ನಲಾಗಿದೆ. ಕಳೆದ ಬಾರಿ ಹ್ಯಾಂಬರ್ಗ್ ಜಿ-20 ಶೃಂಗಸಭೆಯಲ್ಲಿ ಉಭಯ ನಾಯಕರು ಅನೌಪಚಾರಿಕ ಭೇಟಿ ಮಾಡಿದ್ದರು. ಈ ಸಂದರ್ಭ ದೊಕ್ಲಾಮ್ ವಿಷಯ ಬಂದು ಹೋಗಿತ್ತು. ಇದೀಗ, ಈ ಬಗ್ಗೆ ಹೆಚ್ಚು ಚರ್ಚೆ ನಡೆಯುವ ಸಾಧ್ಯತೆ ಇದೆ. ದೊಕ್ಲಾಮ್ ವಿವಾದದ ಬಳಿಕ ಉಭಯ ರಾಷ್ಟ್ರಗಳ ನಡುವೆ ಹಾಳಾಗಿರುವ ಬಾಂಧವ್ಯ ವೃದ್ಧಿಗೂ ಈ ಮಾತುಕತೆ ವೇದಿಕೆಯಾಗಲಿದೆ.
ಮಾಧ್ಯಮಗಳ ವರದಿ ಪ್ರಕಾರ, ಮಧ್ಯಾಹ್ನ 12.30ರಿಂದ 1 ಗಂಟೆವರೆಗೆ 30 ನಿಮಿಷಗಳ ಕಾಲ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಚೀನಾ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ