Publish Date: Tue, 05 Sep 2017 (09:22 IST)
Updated Date: Tue, 05 Sep 2017 (09:25 IST)
ಕೊಲೊಂಬೊ: ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನದಿಂದ ಇದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ?
ಶ್ರೀಲಂಕಾದ ಉರಿಬಿಸಿಲು. ಇಲ್ಲಿನ ಉರಿಬಿಸಿಲಿನಲ್ಲಿ ಆಡಿ ನನ್ನ ಮುಖದ ಅವಸ್ಥೆ ಹೇಗಾಗಿ ನೋಡಿ ಎಂದು ಕೊಹ್ಲಿ ಟ್ವಿಟರ್ ನಲ್ಲಿ ಫೋಟೋ ಹಾಕಿಕೊಂಡಿದ್ದಾರೆ.
‘ಉರಿಬಿಸಿಲಲ್ಲಿ ನಿಂತು ಆಡುವುದೇ ದೊಡ್ಡ ಸವಾಲು. ನಾನು ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊನೆಗೆ ಎರಡು ರನ್ ಗಾಗಿ ಓಡುವುದೇ ಬೇಡ ಎಂದು ನಿರ್ಧರಿಸಿದ್ದೆವು. ಅಷ್ಟು ಬಿಸಿಲಿತ್ತು. ನಮಗೆ ಬೇರೇನೂ ಯೋಚನೆ ಮಾಡಲೂ ಆಗುತ್ತಿರಲಿಲ್ಲ. ಸ್ಕೋರ್ ಬೋರ್ಡ್ ಕಡೆಗೂ ನೋಡುತ್ತಿರಲಿಲ್ಲ. ನಮ್ಮ ಕಣ್ಣು ಬಾಲ್ ಕಡೆಗಷ್ಟೇ ನೆಟ್ಟಿತ್ತು’ ಎಂದು ಕೊಹ್ಲಿ ಬಿಸಿಲಿನ ಮೇಲೆ ಕೋಪ ಪ್ರದರ್ಶಿಸಿದ್ದಾರೆ.
Krishnaveni
Publish Date: Tue, 05 Sep 2017 (09:22 IST)
Updated Date: Tue, 05 Sep 2017 (09:25 IST)