ಉತ್ತರ ಕೊರಿಯಾ : ಉತ್ತರ ಕೊರಿಯಾದಲ್ಲಿರುವ ನಾಯಿಗಳ ಗೃಹಚಾರವೇ ಸರಿ ಇಲ್ಲ. ಯಾಕೆಂದರೆ ಇಲ್ಲಿನ ಜನರು ನಾಯಿ ಮಾಂಸಕ್ಕಾಗಿ ಮುಗಿಬಿದ್ದಿದ್ದಾರಂತೆ.
ಇದಕ್ಕೆ ಕಾರಣವೆನೆಂದರೆ ಉತ್ತರ ಕೊರಿಯಾದಲ್ಲಿ ಬೇಸಿಗೆ ಬಿಸಿಯನ್ನು ಸಮತೋಲನಗೊಳಿಸಲು ಜನರು ನಾಯಿ ಮಾಂಸವನ್ನು ಸೇವಿಸುತ್ತಾರಂತೆ. ನಾಯಿಯ ಮಾಂಸ ಸೇವಿಸಿದರೆ ಬಿಸಿಲಿನ ತಾಪಕ್ಕೆ ದೇಹವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ಆದಕಾರಣ ಅಲ್ಲಿನ ಕ್ಯಾಲೆಂಡರ್ ಪ್ರಕಾರ ಬೇಸಿಗೆಯ ಮೂರು ದಿನ ಅಂದರೆ ಜುಲೈ 17, 27 ಹಾಗೂ ಆಗಸ್ಟ್ 27ರ ದಿನದಂದು ಉಷ್ಣಾಂಶ ಹೆಚ್ಚಾಗಿರುತ್ತದೆ. ಈ ವೇಳೇ ಉಷ್ಣಾಂಶ 40 ಡಿಗ್ರೀ ಗಿಂತ ಅಧಿಕವಾಗಿರುತ್ತದೆಯಂತೆ. ಇದನ್ನು ಅಲ್ಲಿನ ಜನ 'ಡಾಗ್ ಡೇಸ್ ಆಫ್ ಸಮ್ಮರ್' ಎಂದು ಹೇಳುತ್ತಾರೆ. ಆ ವೇಳೆ ನಾಯಿ ಮಾಂಸವನ್ನು ಸೇವಿಸುವ ರೂಢಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ