Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾಕಿಸ್ತಾನದಲ್ಲಿ ಅತಂತ್ರ ಫಲಿತಾಂಶ: ಅಧಿಕಾರಕ್ಕಾಗಿ ಪಕ್ಷಗಳ ಕಿತ್ತಾಟ

ಪಾಕಿಸ್ತಾನದಲ್ಲಿ ಅತಂತ್ರ ಫಲಿತಾಂಶ: ಅಧಿಕಾರಕ್ಕಾಗಿ ಪಕ್ಷಗಳ ಕಿತ್ತಾಟ
ಇಸ್ಲಾಮಾಬಾದ್ , ಗುರುವಾರ, 26 ಜುಲೈ 2018 (09:57 IST)
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಷ್ಟ್ರೀಯ ಚುನಾವಣೆ ನಡೆದು ಫಲಿತಾಂಶ ಬಂದಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಮಾಜಿ ಕ್ರಿಕೆಟಿಗ, ಇಮ್ರಾನ್ ಖಾನ್ ನೇತೃತ್ವದಲ್ಲಿ ಪಿಟಿಐ 113 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಿದ್ದರೂ ಬಹುಮತ ಸಾಬೀತುಪಡಿಸಲು ಅದಕ್ಕೆ ಇನ್ನೂ 25 ಸ್ಥಾನಗಳು ಬೇಕು. ಸದ್ಯಕ್ಕೆ ಜೈಲಿನಲ್ಲಿರುವ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷ 64, ಬೆನಜೀರ್ ಬುಟ್ಟೋ ಅವರ ಪಿಪಿಪಿ ಪಕ್ಷಕ್ಕೆ 43 ಸ್ಥಾನ ಸಿಕ್ಕಿವೆ. ಇತರರು 50 ಸ್ಥಾನ ಗೆದ್ದಿದ್ದಾರೆ.

ಇದೀಗ ಅಧಿಕಾರದ ಗದ್ದುಗೆ ಪಡೆಯಲು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪ್ರಯತ್ನ ನಡೆಸಿದೆ. ಆದರೆ ಈ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಆಪಾದಿಸಿವೆ. ಅತಂತ್ರ ಸ್ಥಿತಿಯಿಂದಾಗಿ ಯಾರು ಸರ್ಕಾರ ರಚಿಸಬಹುದು ಎಂಬ ಕುತೂಹಲ ಒಂದೆಡೆಯಾದರೆ, ಪರಸ್ಪರ ರಾಜಕೀಯ ಕೆಸರೆರಚಾಟವೂ ಜೋರಾಗಿ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದುತ್ವ ಉಳಿಸಲು ಐವರು ಮಕ್ಕಳನ್ನು ಹೆರಲು ಸಲಹೆ ಕೊಟ್ಟ ಬಿಜೆಪಿ ನಾಯಕ