ಸಿಂಗಾಪುರ : ಕೆಲವರು ಸಣ್ಣ ಮೈಕೈ ನೋವು ಇದ್ದರೆ ಸಾಕು ಅದಕ್ಕೆ ಪೇನ್ ಕಿಲ್ಲರ್ ಮಾತ್ರೆಯನ್ನು ಬಳಸುತ್ತಾರೆ. ಅಂತವರು ಇನ್ನು ಮುಂದೆ ಈ ಪೇನ್ ಕಿಲ್ಲರ್ ನ್ನು ಬಳಸುವ ಮುನ್ನ ಎಚ್ಚರದಿಂದಿರಿ.
ಹೌದು. ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಸಂಶೋಧನೆಯಲ್ಲಿ ಅಸೆಟಾಮಿನೋಫೆನ್ ಪೇನ್ ಕಿಲ್ಲರ್ ನಿಂದ ಲಿವರ್ ಗೆ ಹಾನಿಯಾಗುವ ಸಾಧ್ಯತೆಯಿದೆ ಎಂಬ ಅಂಶ ಸಾಬೀತಾಗಿದೆ.
ಈ ಪೇನ್ ಕಿಲ್ಲರ್ ಸೇವಿಸುವುದರಿಂದ ಲಿವರ್ ನಲ್ಲಿ ಸಿಸ್ಟಿನ್ ಎನ್ನುವ ಪದಾರ್ಥ ಉತ್ಪತ್ತಿಯಾಗುವ ಮೂಲಕ ಈ ಪದಾರ್ಥ, ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಜೀವಕೋಶಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಲಿವರ್ ನಲ್ಲಿರುವ ಪೌಷ್ಟಿಕಾಂಶ ಒಡೆದು, ಲಿವರ್ ಹಾಳಾಗುತ್ತದೆ ಎಂದು ಈ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.