ಇರಾನ್ : ಉಗ್ರರಿಗೆ ನೆಲೆ ನೀಡಿರುವ ಪಾಕಿಸ್ತಾನದ ಮೇಲೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದು, ಇದೀಗ ಇರಾನ್ ಕೂಡ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ.
ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ಏರ್ ಸ್ಟ್ರೈಕ್ ಮಾಡಿ ಎಚ್ಚರಿಕೆ ರವಾನಿಸಿತ್ತು. ಇದೀಗ ಇರಾನ್, ನೆರೆಯ ರಾಷ್ಟ್ರಗಳ ಜೊತೆ ನಿಮ್ಮ ಬಾಂಧವ್ಯ ಹೇಗಿದೆ ಎಂಬುವುದು ಗೊತ್ತಿದೆ. ಎಲ್ಲಿ ನೋಡಿದರೂ ಅಶಾಂತಿ ಸೃಷ್ಟಿಸುವುದೇ ನಿಮ್ಮ ಕಾಯಕವಾಗಿದೆ ಎಂದು ಕಿಡಿಕಾರಿದೆ.
ಅಲ್ಲದೇ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಹೋಗಿ, ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಇರಾನ್ ನಲ್ಲೂ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದು, ಉಗ್ರಗಾಮಿ ಸಂಘಟನೆಗಳನ್ನು ಹತ್ತಿಕ್ಕದ್ದಿದ್ದರೆ ಪಾಕ್‍ನೊಳಗೆ ನುಗ್ಗಿ ನಾವೇ ಉಗ್ರರ ನೆಲೆಗಳನ್ನು ನಾಶ ಪಡಿಸುತ್ತೇವೆ. ನಮ್ಮ ನಿರ್ಣಯಗಳನ್ನು ಪರೀಕ್ಷೆ ಮಾಡಲು ಮುಂದಾಗ ಬೇಡಿ. ನಿಮ್ಮ ಉಪಟಳದಿಂದ ತೊಂದರೆಗೆ ಒಳಗಾದದ ಒಂದೇ ಒಂದು ನೆರೆ ದೇಶವೂ ಇಲ್ಲ ಎಂದು ಇರಾನ್ ಜನರಲ್ ಖಾಸಿಂ ಸೊಲೈಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.