Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೆಲ್ಟಾ ವೈರಸ್ ಸೊಂಕಿನ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ICMR ಅಧ್ಯಯನ ವರದಿ

ಡೆಲ್ಟಾ ವೈರಸ್ ಸೊಂಕಿನ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ICMR ಅಧ್ಯಯನ ವರದಿ
ನವದೆಹಲಿ , ಗುರುವಾರ, 19 ಆಗಸ್ಟ್ 2021 (09:27 IST)
ನವದೆಹಲಿ: ಚೆನ್ನೈನಲ್ಲಿ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನವು ಕೋವಿಡ್ -19 ವೈರಸ್ನ ಡೆಲ್ಟಾ ರೂಪಾಂತರವು ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಜನರಿಗೆ ಸೋಂ
ಕು ತಗಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಡುಹಿಡಿದಿದೆ ಎನ್ನಲಾಗಿದೆ.

ಆದರೆ ಮರಣವನ್ನು ಕಡಿಮೆ ಮಾಡುತ್ತದೆ ಕೂಡ ಕಂಡು ಕೊಳ್ಳಲಾಗಿದೆಯಂತೆ. ಈ ಅಧ್ಯಯನವನ್ನು ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ, ಚೆನ್ನೈನ ಸಾಂಸ್ಥಿಕ ನೈತಿಕ ಸಮಿತಿಯು ಅಂಗೀಕರಿಸಿದೆ ಮತ್ತು ಆಗಸ್ಟ್ 17 ರಂದು ಜರ್ನಲ್ ಆಫ್ ಇನ್ಫೆಕ್ಷನ್ ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದ ಸಂಶೋಧನೆಗಳು ಡೆಲ್ಟಾ ರೂಪಾಂತರ ಅಥವಾ ಃ.1.617.2 ನ ಹರಡುವಿಕೆಯು ವ್ಯಾಕ್ಸಿನೇಟೆಡ್ ಮತ್ತು ಲಸಿಕೆ ಹಾಕದ ಗುಂಪುಗಳ ನಡುವೆ ಭಿನ್ನವಾಗಿರುವುದಿಲ್ಲ ಎಂದು ಸೂಚಿಸುತ್ತದೆ. ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಹರಡುತ್ತಿರುವ ಪ್ರಬಲವಾದ ತಳಿಯಾಗಿದ್ದು, ಇದು ಭಾರತದಲ್ಲಿ SARS-CoV-2 ನ ಎರಡನೇ ತರಂಗಕ್ಕೆ ಕಾರಣವಾಗಿದೆ ಕೂಡ.
( ICMR study report from Chennai providing shocking information on delta virus infection)


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ಗುಡ್ ನ್ಯೂಸ್