ಆಸ್ಟ್ರೇಲಿಯಾ : ಹಾಲಿವುಡ್ ಖ್ಯಾತ ಮಾಡೆಲ್ ಒಬ್ಬರು ಒಂದು ಸೂಪರ್ ಆಹಾರವನ್ನು ಸೇವಿಸುವುದರ ಮೂಲಕ ತನ್ನ ಸ್ತನದ ಗಾತ್ರ ಹೆಚ್ಚಾಗಿರುವುದಾಗಿ ತಿಳಿಸಿದ್ದಾಳೆ.
ಹೌದು. ಹಾಲಿವುಡ್ ನ ಖ್ಯಾತ ನಟಿ, ಮಾಡೆಲ್ ಬ್ರಿಗೆಟ್ಟೆ ಕೂಪರ್ ಇಂಥದ್ದೊಂದು ಹೇಳಿಕೆ ನೀಡಿದ್ದು, ನಾನು ಮಕಾ ಪೌಡ್ ಸೇವನೆ ಮಾಡಿ ನನ್ನ ಸ್ತನಗಳು ಸಿ ಕಪ್ ಸೖಜ್ ನಿಂದ ಇ ಕಪ್ ಸೖಜಿಗೆ ಏರಿದವು ಎಂದು ಹೇಳಿದ್ದಾಳೆ.
ತಮ್ಮ ಸ್ತನದ ಗಾತ್ರ ಚಿಕ್ಕದಾಗಿರುವುದರಿಂದ ಬೇಸರಗೊಂಡಿದ್ದ ನಟಿ ಅದನ್ನು ಹೆಚ್ಚಿಸಲು ನಿರಂತರವಾಗಿ ಪೌಡರ್ ಸೇವನೆ ಮಾಡುತ್ತಿದ್ದು, ಸೈಡ್ ಎಫೆಕ್ಟ್ ತಾಳಲಾರದೆ 2 ತಿಂಗಳ ಹಿಂದೆ ಅದನ್ನು ನಿಲ್ಲಿಸಿದರು. ನಂತರ ಪೆರುವಿನಲ್ಲಿ ಸಿಗುವ ಒಂದು ಜಾತಿಯ ಗಡ್ಡೆ ಮಕಾ ಪೌಡ್ ನ್ನು ಸೇವಿಸಿದ ಮೇಲೆ ಆಕೆಯ ಸ್ತನದ ಗಾತ್ರ ಹೆಚ್ಚಾಗಿದೆಯಂತೆ.
ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕೆ, ನನ್ನ ಸ್ತನ ಗಾತ್ರ ಹಿಗ್ಗಿರುವುದಕ್ಕೆ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ