ಡೆಹ್ರಾಡೂನ್ : ಉತ್ತರಾಖಂಡದ ಎಲ್ಲಾ ಮದರಸಾಗಳಲ್ಲಿ ಇನ್ಮುಂದೆ ಡ್ರೆಸ್ ಕೋಡ್ಗಳು ಜಾರಿಗೆ ಬರಲಿದೆ ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ತಿಳಿಸಿದೆ.
ಈ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಮಾತನಾಡಿ, ಉತ್ತರಾಖಂಡ ವಕ್ಫ್ ಬೋರ್ಡ್ನಲ್ಲಿ ನೋಂದಣಿಯಾಗಿರುವ 103 ಮದರಸಾಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲಾಗುತ್ತದೆ.
ಅಷ್ಟೇ ಅಲ್ಲದೇ ಮದರಸಾವು ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತರಗತಿಗಳು ನಡೆಯಲಿದ್ದು, ಅಲ್ಲಿಯೂ ಎನ್ಸಿಇಆರ್ಟಿ ಪುಸ್ತಕಗಳನ್ನು ಸಹ ಪರಿಚಯಿಸಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲಾ ಮದರಸಾಗಳನ್ನು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ. ಆಧುನಿಕ ಶಾಲೆಗಳ ಮಾದರಿಯಲ್ಲಿ ಮದರಸಾಗಳನ್ನು ನಡೆಸಲು ಸಹ ಸಿದ್ಧತೆ ನಡೆದಿದ್ದು, ಮೊದಲ ಹಂತದಲ್ಲಿ 7 ಮದರಸಾಗಳನ್ನು ಆಧುನಿಕರಣಗೊಳಿಸಲಾಗುವುದು.