ಗ್ಯಾಂಗ್ಟಾಕ್ : ಸಿಕ್ಕಿಂನ ನಾಥುಲಾ ಪ್ರದೇಶದಲ್ಲಿ ಮಂಗಳವಾರ ಭಾರೀ ಹಿಮಪಾತ ಉಂಟಾಗಿದ್ದು, ಘಟನೆಯಲ್ಲಿ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಂನ ಭಾರತ-ಚೀನಾ ಗಡಿಯ ಸಮೀಪವಿರುವ ಎತ್ತರದ ಪರ್ವತದ ಹಾದಿಯಾದ ನಾಥುಲಾ ಬಳಿ ಮಧ್ಯಾಹ್ನ 12:20ರ ವೇಳೆಗೆ ಹಿಮಪಾತ ಸಂಭವಿಸಿದೆ. ಈ ಪ್ರದೇಶ ಸಮುದ್ರ ಮಟ್ಟದಿಂದ 4,310 ಮೀ. (14,140 ಅಡಿ) ಎತ್ತರದಲ್ಲಿದೆ ಮತ್ತು ಇದು ಪ್ರಮುಖ ಪ್ರವಾಸಿ ತಾಣವಾಗಿದೆ.
ವರದಿಗಳ ಪ್ರಕಾರ 150ಕ್ಕೂ ಹೆಚ್ಚು ಪ್ರವಾಸಿಗರು 15 ಮೈಲುಗಳಷ್ಟು ಮುಂದೆ ಸಾಗಿದ್ದು, ಅಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಹಿಮದ ಅಡಿಯಲ್ಲಿ ಸಿಲುಕಿದ ಸುಮಾರು 30 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ರಾಜ್ಯ ರಾಜಧಾನಿ ಗ್ಯಾಂಗ್ಟನ್ನ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.