ಅಮೇರಿಕಾ : ಪೊಲೀಸರಿಂದ ಕಪ್ಪು ವರ್ಣೀಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದಲ್ಲಿ ಪೊಲೀಸರು ಧರಣಿನಿರತರಲ್ಲಿ ಕ್ಷಮೆಯಾಚಿಸಿದ್ದಾರೆ.
ಕಪ್ಪು ವರ್ಣದ ವ್ಯಕ್ತಿಯೊರ್ವನನ್ನು ಪೊಲೀಸರು ಹೊಡೆದು ಹತ್ಯೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ ಕೊರೊನಾ ಭೀತಿ ಇದ್ದರೂ ಅದನ್ನು ಲೆಕ್ಕಿಸದೆ ಜನರು ಪ್ರತಿಭಟನೆ ಹಿಂಸಾತ್ಮಕ ನಡೆಸಿದ್ದಾರೆ.
ಇದೀಗ ಪ್ರತಿಭಟನಾಕಾರರ ಎದುರು ಮಿನ್ನಿಪೊಲೀಸ್ ನಗರದ ಪೊಲೀಸರು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಆದಕಾರಣ ಜನರು ಧರಣಿ ಕೈಬಿಟ್ಟು ಪೊಲೀಸರನ್ನು ಆಲಂಗಿಸಿದ್ದಾರೆ ಎನ್ನಲಾಗಿದೆ.