ಆಹಾರದ ಬಿಕ್ಕಟ್ಟು ದೇಶದ ಬಡವರ ಭವಿಷ್ಯವನ್ನು ಹತಾಶವಾಗಿ ಕಾಣುವಂತೆ ಮಾಡುತ್ತಿದೆ ಎಂದು ಪಿಎಂಎಂ ವರದಿ ಮಾಡಿದೆ.
ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಇತ್ತೀಚಿನ ಸಂವೇದನಾಶೀಲ ಬೆಲೆ ಸೂಚಕ ಪ್ರಕಾರ, ಏಪ್ರಿಲ್ 19, 2023 ಕ್ಕೆ ಕೊನೆಗೊಂಡ ವಾರಕ್ಕೆ ವರ್ಷದಿಂದ ವರ್ಷಕ್ಕೆ ಬೆಲೆಯಲ್ಲಿ 47.2 ಶೇಕಡಾ ಏರಿಕೆಯಾಗಿದೆ ಅಂತೆಯೇ ಧಾನ್ಯಗಳ ಅಗಾಧ ಕೊರತೆಗೆ ದೇಶ ತುತ್ತಾಗಿದೆ.
ಎಲ್ಲಾ ಪ್ರಾಂತ್ಯಗಳನ್ನು ಒಳಗೊಂಡ ಹಲವಾರು ಪ್ರದೇಶಗಳ ಮಾರುಕಟ್ಟೆಗಳಲ್ಲಿರುವ ಅವ್ಯವಸ್ಥೆ ಮತ್ತು ಕಾಲ್ತುಳಿತದ ದುರಂತಗಳಿಂದ ಪಾಕ್ ನಲುಗಿದ್ದು ದಿನಂಪ್ರತಿ ಸುದ್ದಿಮಾಧ್ಯಮಗಳಲ್ಲಿ ಇಂತಹುದೇ ವರದಿ ಪ್ರಸಾರವಾಗುತ್ತಿದೆ.
ಪಾಕಿಸ್ತಾನದ ಪ್ರಮುಖ ಪತ್ರಿಕೆ 'ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ಇತ್ತೀಚಿನ ವರದಿಯ ಪ್ರಕಾರ, ಸಾವಿರಾರು ಜನರು ಮಾರುಕಟ್ಟೆಗೆ ಧಾವಿಸುತ್ತಿದ್ದು ಸಬ್ಸಿಡಿ ಗೋಧಿ ಹಿಟ್ಟಿನ ಚೀಲಗಳನ್ನು ಪಡೆಯಲು ಗಂಟೆಗಟ್ಟಲೆ ಕಾಯುತ್ತಿದ್ದಾರೆ.