ನವದೆಹಲಿ : ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರ ನಡುವೆ ಸಂವಹನ ನಡೆಸಲು ಬಳಕೆಯಾಗುತ್ತಿದ್ದ 14 ಅಪ್ಲಿಕೇಷನ್ಗಳನ್ನು ಕೇಂದ್ರ ನಿಷೇಧಿಸಿದೆ.
ನಿಷೇಧಿಸಲಾದ ಎಲ್ಲಾ ಅಪ್ಲಿಕೇಷನ್ಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಗಳೊಂದಿಗೆ ಸಂದೇಶ ರವಾನಿಸಲು ಬಳಕೆಯಾಗುತ್ತಿತ್ತು. ಈ ಬಗ್ಗೆ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸೂಕ್ತ ಮಾಹಿತಿ ನೀಡಿದ್ದವು.
ಗುಪ್ತಚರ ಸಂಸ್ಥೆಗಳು ಸೂಚಿಸಿದ್ದ ಅಪ್ಲಿಕೇಷನ್ಗಳಲ್ಲಿ ಪಾಕಿಸ್ತಾನದಿಂದ ಸೂಚನೆಗಳು ರವಾನೆಯಾಗುತ್ತಿದ್ದವು ಎಂದು ಮೂಲಗಳು ತಿಳಿಸಿವೆ.