ಗೂಗಲ್ ಪ್ಲೇ ಸ್ಟೋರ್ ನಿಂದ ಎಲ್ಲಾ ಕಾಲ್ ರೆಕಾರ್ಡಿಂಗ್ ಮೊಬೈಲ್ ಅಪ್ಲಿಕೇಶನ್ ಗಳನ್ನು ಇಂದು ತೆಗೆದು ಹಾಕಲಿದೆ.
ಗೂಗಲ್ ಕಳೆದ ತಿಂಗಳು ಮೇ 11ರಿಂದ ಕಾಲ್ ರೆಕಾರ್ಡಿಂಗ್ ಮಾಡುವ ಎಲ್ಲಾ ಮೊಬೈಲ್ ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದು ಹಾಕುವುದಾಗಿ ಘೋಷಿಸಿತ್ತು.
ಕೂಪರ್ ಟಿನೊ ಆಧಾರಿತ ಸಾಫ್ಟ್ ವೇರ್ ಕಂಪನಿ ನಿಯಮಗಳ ವಿರುದ್ಧ ಕಾಲ್ ರೆಕಾರ್ಡಿಂಗ್ ಆ್ಯಪ್ ಗಳು ಕಾರ್ಯ ಚರಿಸುತ್ತಿವೆ. ಕಾಲ್ ರೆಕಾರ್ಡಿಂಗ್ ಗ್ರಾಹಕರ ವೈಯಕ್ತಿಕ ಹಕ್ಕುಗಳಿಗೆ ಧಕ್ಕೆ ಎಂಬುದು ಕಂಪನಿಯ ವಾದವಾಗಿದ್ದರೂ ಹಲವು ವರ್ಷಗಳಿಂದ ಕಾಲ್ ರೆಕಾರ್ಡಿಂಗ್ ಆ್ಯಪ್ ಗಳು ಕಾರ್ಯ ಚರಿಸುತ್ತಿದ್ದವು.