Webdunia - Bharat's app for daily news and videos

Install App

ಖತಾರ್ ಏರ್ವೇಸ್ಗೆ ಅತ್ಯುತ್ತಮ ವಿಮಾನಯಾನ ಸಂಸ್ಥೆ ಗರಿ; ಟಾಪ್ 20 ಬೆಸ್ಟ್ ಏರ್ಲೈನ್ಸ್ ಪಟ್ಟಿ ಇಲ್ಲಿದೆ!

Webdunia
ಬುಧವಾರ, 21 ಜುಲೈ 2021 (15:55 IST)
ನವದೆಹಲಿ(ಜು.20):  ಕೊರೋನಾ ವೈರಸ್ ಕಾರಣ ಅತೀ ಹೆಚ್ಚು ಹೊಡೆತ ತಿಂದ ಕ್ಷೇತ್ರಗಳ ಪೈಕಿ ವಿಮಾನಯಾನ ಕೂಡ ಒಂದು. ಮೊದಲ ಅಲೆ ಬಳಿಕ ಪುನರ್ ಆರಂಭಗೊಂಡಿದ್ದ ವಿಮಾನ ಸೇವೆ 2ನೇ ಅಲೆಯಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. 2021ರಲ್ಲಿ ಕೆಲವೇ ತಿಂಗಳು ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಿದೆ.


ಇದರ ಆಧಾರದಲ್ಲಿ ಇದೀಗ ಈ ವರ್ಷದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟಗೊಂಡಿದೆ. ಇದರಲ್ಲಿ ಖತಾರ್ ಏರ್ವೇಸ್ ಮೊದಲ ಸ್ಥಾನ ಪಡೆದುಕೊಂಡಿದೆ.
ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ
•             2021ರ ಬೆಸ್ಟ್ ಏರ್ಲೈನ್ಸ್; ಖತಾರ್ ಏರ್ವೇಸ್ಗೆ ಮೊದಲ ಸ್ಥಾನ
•             ಏರ್ಲೈನ್ಸ್ ರೇಟಿಂಗ್ ಸಂಸ್ಥೆಯಿಂದ ಬೆಸ್ಟ್ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ

ಕಳೆದ ವರ್ಷ ಏರ್ ನ್ಯೂಜಿಲೆಂಡ್ ಮೊದಲ ಸ್ಥಾನ ಅಲಂಕರಿಸಿತ್ತು. ಇದೀಗ ಖತಾರ್ ಏರ್ವೇಸ್ ಅಗ್ರಸ್ಥಾನ ಪಡೆದುಕೊಂಡಿದೆ. ಏರ್ಲೈನ್ಸ್ ರೇಟಿಂಗ್ .ಕಾಂ ಪ್ರತಿ ವರ್ಷ ವಿಮಾನ ಸೇವೆ, ಸುರಕ್ಷತೆ ಸೇರಿದಂತೆ ಹಲವು ಮಾನದಂಡಗಳನ್ನಿಟ್ಟು ರೇಟಿಂಗ್ ನೀಡುತ್ತಿದೆ. ಈ ರೀತಿ ಅತ್ಯುತ್ತಮ 20 ವಿಮಾನಯಾನ ಸಂಸ್ಥೆಗಳನ್ನು ಪ್ರಕಟಿಸಲಾಗಿದೆ.
ಟಾಪ್ 20 ಪಟ್ಟಿಯಲ್ಲಿ ಕಾಣಿಸಿಕೊಂಡ ವಿಮಾನಯಾನ ಸಂಸ್ಥೆಗಳು  7 ಸ್ಟಾರ್ ರೇಟಿಂಗ್ ಪಡೆದಿರಬೇಕು. ವಿಮಾನ ಸೇವೆಯಲ್ಲಿನ ಈ ಹಿಂದಿನ  ಎಲ್ಲಾ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.  ಏರ್ಲೈನ್ಸ್ ರೇಟಿಂಗ್ .ಕಾಂ ಪ್ರಕಟಿಸಿರುವ ಟಾಪ್ 20 ಬೆಸ್ಟ್ ವಿಮಾನಯಾನ ಸಂಸ್ಥೆ ಪಟ್ಟಿ ಇಲ್ಲಿವೆ.
•             ಕತಾರ್ ಏರ್ವೇಸ್
•             ಏರ್ ನ್ಯೂಜಿಲೆಂಡ್
•             ಸಿಂಗಾಪುರ್ ಏರ್ಲೈನ್ಸ್
•             ಕ್ವಾಂಟಾಸ್, ಎಮಿರೇಟ್ಸ್
•             ಕ್ಯಾಥೆ ಪೆಸಿಫಿಕ್
•             ವರ್ಜಿನ್ ಅಟ್ಲಾಂಟಿಕ್
•             ಯುನೈಟೆಡ್ ಏರ್ಲೈನ್ಸ್
•             EVA ಏರ್
•             ಬ್ರಿಟಿಷ್ ಏರ್ವೇಸ್
•             ಲುಫ್ಥಾನ್ಸ
•             ANA
•             ಫಿನ್ನೇರ್
•             ಜಪಾನ್ ಏರ್ ಲೈನ್ಸ್
•             KLM

•             ಹವಾಯಿಯನ್ ಏರ್ಲೈನ್ಸ್
•             ಅಲಾಸ್ಕಾ ಏರ್ಲೈನ್ಸ್
•             ವರ್ಜಿನ್ ಆಸ್ಟ್ರೇಲಿಯಾ
•             ಡೆಲ್ಟಾ ಏರ್ ಲೈನ್ಸ್
•             ಎತಿಹಾಡ್ ಏರ್ವೇಸ್

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments