ಮಾಸ್ಕೋ : ಬಿಕಿನಿ ಧರಿಸಿ ಬಂದವರಿಗೆ ಉಚಿತ ಪೆಟ್ರೋಲ್ ನೀಡುತ್ತೇವೆ ಎಂದು ಪ್ರಕಟಣೆ ಹೊರಡಿಸಿ ಗ್ಯಾಸ್ ಸ್ಟೇಷನ್ ಒಂದು ಪೇಚಿಗೆ ಸಿಲುಕಿದ ಘಟನೆ ರಷ್ಯಾದಲ್ಲಿ ನಡೆದಿದೆ.
ಹೌದು. ರಷ್ಯಾದ ಸಮಾರಾದಲ್ಲಿರುವ ಓಲ್ವಿ ಗ್ಯಾಸ್ ಸ್ಟೇಷನ್ ತಮ್ಮ ಮಾರ್ಕೆಟಿಂಗ್ ನ್ನು ಹೆಚ್ಚಿಸಲು ಬಿಕಿನಿ ಧರಿಸಿ ಬಂದವರಿಗೆ ಉಚಿತ ಪೆಟ್ರೋಲ್ ನೀಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಆದರೆ ಬಿಕಿನಿಯಲ್ಲಿ ಮಹಿಳೆಯರಾ? ಅಥವಾ ಪುರುಷರಾ? ಎಂಬ ವಿಚಾರ ತಿಳಿಸಿರಲಿಲ್ಲ.
ಇದರಿಂದಾಗಿ ಪುರುಷರು ಬಣ್ಣ ಬಣ್ಣದ ಬಿಕಿನಿ ಧರಿಸಿ ಗ್ಯಾಸ್ ಸ್ಟೇಷನ್ ಗೆ ಬಂದಿದ್ದಾರೆ. ಪುರುಷರ ಬಿಕಿನಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ತಮ್ಮ ತಪ್ಪನ್ನು ಅರಿತ ಮಾಲೀಕರು ಮೂರೇ ಗಂಟೆಗಳಲ್ಲಿ ಈ ಆಫರ್ ನ್ನು ನಿಲ್ಲಿಸಿದ್ದಾರೆ.