Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನುಮುಂದೆ ತಂದೆಯೂ ಮಗುವಿಗೆ ಸ್ತನ್ಯಪಾನ ಮಾಡಿಸಬಹುದು. ಹೇಗೆ ಗೊತ್ತಾ?

ಇನ್ನುಮುಂದೆ ತಂದೆಯೂ ಮಗುವಿಗೆ ಸ್ತನ್ಯಪಾನ ಮಾಡಿಸಬಹುದು. ಹೇಗೆ ಗೊತ್ತಾ?
ಜಪಾನ್ , ಸೋಮವಾರ, 25 ಮಾರ್ಚ್ 2019 (07:07 IST)
ಜಪಾನ್ : ಮಗು ಎಷ್ಟೇ ಹಠಹಿಡಿದರೂ ಕೂಡ ತಾಯಿ ಅದಕ್ಕೆ ಸ್ತನ್ಯಪಾನ ಮಾಡಿಸಿ ಅಥವಾ ಮುದ್ದುಮಾಡಿ ಅದನ್ನು ಸಮಾಧಾನ ಪಡಿಸುತ್ತಾಳೆ. ಆದರೆ ತಾಯಿ ಇಲ್ಲದ ವೇಳೆ ತಂದೆಗೆ ಮಗುವನ್ನು ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ಜಪಾನ್ ಕಂಪೆನಿಯೊಂದು ವಿಶೇಷ ಸಾಧನವೊಂದನ್ನು ಕಂಡುಹಿಡಿದಿದೆ.

ಹೌದು. ಡೆಂಟ್ಸು ಎಂಬ ಪ್ರಖ್ಯಾತ ಕಂಪನಿಯೊಂದು ಪುರುಷನು ಸಹ ಮಗುವಿಗೆ ಸ್ತನ್ಯಪಾನ ಮಾಡಿಸುವಂತಹ ಫಾರ್ಮುಲಾ ಮಿಲ್ಕ್ ಟ್ಯಾಂಕ್ ಸಾಧನವನ್ನು  ಕಂಡುಹಿಡಿದಿದೆ. ಈ ಸಾಧನಕ್ಕೆ The Father's Nursing Assistant ಎಂದು ಹೆಸರಿಡಲಾಗಿದೆ. ಸ್ತನದಂತಿರುವ ಈ ಸಾಧನವನ್ನು ಧರಿಸಿಕೊಂಡು ಪುರುಷರು ಮಕ್ಕಳಿಗೆ ಹಾಲುಣಿಸಬಹುದು.

 

ಈ ಸಾಧನಕ್ಕೆ ಹಾಲಿನ ಬಾಟಲಿಗೆ ಇರುವಂತೆ ನಿಪ್ಪಲ್ ಇರುತ್ತದೆ. ಇದರಲ್ಲಿ ಹಾಲನ್ನು ಬಿಸಿ ಮಾಡುವ ಮತ್ತು ಬಿಸಿ ಇಡಲು ವ್ಯವಸ್ಥೆ ಇರುತ್ತದೆ. ಶರೀರದ ತಾಪಮಾನದಷ್ಟೇ ಬಿಸಿ ಇರುತ್ತದೆ ಈ ಸಾಧನ. ಇದರಲ್ಲಿ ಹಾಲು ಕುಡಿಯುವ ಮಕ್ಕಳಿಗೆ ತಾವು ತಾಯಿ ಮಡಿಲಲ್ಲಿ ಇದ್ದ ಹಾಗೆ ಭಾಸವಾಗುತ್ತದೆ ಎಂದು ಈ  ಕಂಪನಿ ತಿಳಿಸಿದೆ. ಇದರಲ್ಲಿರುವ ಸೆನ್ಸರ್ ಮಗುವಿಗೆ ಹಸಿವಾಗುವ ಸಮಯ ಮತ್ತು ಮಲಗುವ ಅಭ್ಯಾಸವನ್ನು ಮಾನಿಟರ್ ಮಾಡುತ್ತದೆ. ಹಾಗೇ ಶೀಘ್ರದಲ್ಲಿಯೇ ಕಂಪನಿ ಈ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳೊಂದಿಗೆ ದೈಹಿಕ ಸಂಬಂದ ಬೆಳೆಸಿದ್ದೇನೆ ಏನು ಮಾಡಲಿ?