ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಬೇಕು. ರಾಷ್ಟ್ರ, ರಾಜ್ಯ ನಾಯಕರ ತೀರ್ಮಾನದಂತೆ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಮೈತ್ರಿಗೆ ದ್ರೋಹ ಮಾಡೋದು ಅಂದರೆ ತಂದೆ ತಾಯಿಗೆ ದ್ರೋಹ ಮಾಡಿದಂತೆ. ಹೀಗಂತ ಸಚಿವರೊಬ್ಬರು ಖಡಕ್ ಮಾತು ಹೇಳಿದ್ದಾರೆ.
ನಮ್ಮ ನಾಯಕರು, ಕಾಂಗ್ರೆಸ್ ನಾಯಕರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಅಧಿಕಾರದಿಂದ ಬಿಜೆಪಿಯನ್ನು ದೂರವಿಡುವ ಪ್ರಯತ್ನ ಆಗಬೇಕಿದೆ. ನಮ್ಮ ಗುಂಪುಗಾರಿಕೆ, ವೈಯಕ್ತಿಕ, ಇಚ್ಛಾಶಕ್ತಿ, ಭಿನ್ನಾಭಿಪ್ರಾಯ ಬಿಡಬೇಕು ಎಂದು
ಮೈಸೂರಿನಲ್ಲಿ ಸಾ.ರಾ ಮಹೇಶ್ ಹೇಳಿಕೆ ನೀಡಿದ್ದಾರೆ.
ಎರಡು ಪಕ್ಷದ ನಾಯಕರು ಒಮ್ಮತದಿಂದ ಕೆಲಸ ಮಾಡಬೇಕು ಎಂದ್ರು. ಎರಡು ಪಕ್ಷದವರು ಬದಲಾಗಬೇಕು.
ಹಿಂದಿನ ಉಪ ಚುನಾವಣೆ ಕಹಿ ಘಟನೆಯಿಂದ ಈ ಹೇಳಿಕೆ ನೀಡಿದ್ದಾಗಿ ತಿಳಿಸಿದ್ರು. ಇದು ತಗೋ ಕೊಡು ಪಾಲಿಸಿ.
ಯಾರನ್ನು ಬಲವಂತವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ನೀವು ಎಷ್ಟು ಪ್ರೀತಿಸುತ್ತಿರೋ ಗೌರವಿಸುತ್ತಿರೋ ನಾವು ಅಷ್ಟೇ ಪ್ರೀತಿಸುತ್ತೀವಿ ಅಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಸಚಿವ ಸಾ.ರಾ ಮಹೇಶ್ ಹೇಳಿದ್ರು.