Publish Date: Sat, 30 May 2020 (08:56 IST)
Updated Date: Sat, 30 May 2020 (08:57 IST)
ಬೆಂಗಳೂರು: ಫೇಸ್ ಬುಕ್ ನಲ್ಲಿ ನಿಮ್ಮ ವಿಡಿಯೋ ಹೆಚ್ಚಾಗಿ ವೈರಲ್ ಆಗುತ್ತಿದೆಯೇ? ಹಾಗಿದ್ದರೆ ಫೇಸ್ ಬುಕ್ ಸಂಸ್ಥೆ ನಿಮ್ಮ ಮೇಲೆ ಹದ್ದಿನಗಣ್ಣಿರಿಸಲಿದೆ.
ಪ್ರಾಯೋಗಿಕವಾಗಿ ಇದು ಮೊದಲು ಅಮೆರಿಕಾದಲ್ಲಿ ಜಾರಿಗೆ ಬರಲಿದೆ. ಅನುಮಾನಸ್ಪದ ಖಾತೆಗಳು, ಹೆಚ್ಚು ವೈರಲ್ ವಿಡಿಯೋ ಪ್ರಕಟಿಸುತ್ತಿರುವ ಖಾತೆದಾರರ ಐಡಿಗಳ ಮೇಲೆ ಫೇಸ್ ಬುಕ್ ನಿಗಾ ಇಡಲಿದೆ. ಖಾತೆಗಳನ್ನು ಮತ್ತಷ್ಟು ವಿಶ್ವಾಸಾರ್ಹಗೊಳಿಸಲು ಈ ಕ್ರಮ ಎಂದು ಫೇಸ್ ಬುಕ್ ಸ್ಪಷ್ಟಪಡಿಸಿದೆ.