ವಾಷಿಂಗ್ಟನ್: ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಸಹೋದರಿ ರಾಂಡಿ ಝುಕರ್ ಬರ್ಗ್ ಗೆ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಲಾಗಿದೆ.
ಲಾಸ್ ಏಂಜಲೀಸ್ ನಿಂದ ಮೆಕ್ಸಿಕೋಗೆ ತೆರಳುತ್ತಿದ್ದ ಅಲಸ್ಕಾ ಏರ್ ಲೈನ್ಸ್ ನಲ್ಲಿ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ರಾಂಡಿ ದೂರಿದ್ದಾರೆ. ಈ ಬಗ್ಗೆ ಇದೀಗ ವಿಮಾನ ಸಂಸ್ಥೆ ತನಿಖೆ ನಡೆಸುವುದಾಗಿ ಹೇಳಿಕೊಂಡಿದೆ.
ಪ್ರಯಾಣ ಮಾಡುತ್ತಿದ್ದ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ವಿಮಾನದಲ್ಲಿದ್ದ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ತನ್ನ ಶರೀರದ ಬಗ್ಗೆಯೇ ಅಸಭ್ಯವಾಗಿ ಮಾತನಾಡಿದ್ದ. ಈ ಬಗ್ಗೆ ವಿಮಾನದ ಸಿಬ್ಬಂದಿಗಳಿಗೆ ದೂರು ನೀಡಿದರೂ ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಆತ ಖಾಯಂ ಪ್ರಯಾಣಿಕ ಎಂದು ಎದುರು ಹಾಕಿಕೊಳ್ಳಲು ಹಿಂದೇಟು ಹಾಕಿದರಲ್ಲದೆ, ತನ್ನನ್ನೇ ಹಿಂದಿನ ಸೀಟಿನಲ್ಲಿ ಕೂರುವಂತೆ ಒತ್ತಾಯಿಸಿದರು ಎಂದು ರಾಂಡಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ