ಕ್ಯಾಲಿಫೋರ್ನಿಯಾ: ಈಗ ಕೂತಲ್ಲಿ ನಿಂತಲ್ಲಿ, ಎಲ್ಲೇ ಇದ್ದರೂ ಫೇಸ್ ಬುಕ್ ಆನ್ ಇದ್ದೇ ಇರುತ್ತೆ. ಫೇಸ್ ಬುಕ್ ನೋಡದೆ ಒಂದು ಕ್ಷಣ ಸಹ ಸುಮ್ಮನಿರಲು ಆಗದವರೂ ಇದ್ದಾರೆ. ಸೋಷಿಯಲ್ ಮೀಡಿಯಾಗೆ ಅಷ್ಟರ ಮಟ್ಟಿಗೆ ಅಡಿಕ್ಟ್ ಆದವರೂ ಇದ್ದಾರೆ. ಆದ್ರೆ ಅಕೌಂಟ್ ಭದ್ರತೆ ಬಗ್ಗೆ ಸ್ವಲ್ಪವಾದರು ಭಯ ಇದ್ದೇ ಇರುತ್ತೆ. ಇನ್ಮುಂದೆ ನಿಮ್ಮ ಖಾತೆ ಸೇಫ್ ಆಗಲಿದೆ.
ನಿಮ್ಮ ಫೇಸ್ ಬುಕ್ ಅಕೌಂಟ್ ಲಾಕ್ ಆಯ್ತ. ಹಾಗಿದ್ರೆ ತಲೆ ಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಕಂಪೆನಿಯವರು ಟೆಸ್ಟಿಂಗ್ ಗೆಂದು ನಿಮ್ಮ ಅಕೌಂಟ್ ಲಾಕ್ ಮಾಡಿರಬಹುದು. ಇದಕ್ಕೆ ಕಾರಣ ಇನ್ಮುಂದೆ ನಿಮ್ಮೆಲ್ಲ ಖಾತೆಗಳಿಗೂ ಫೇಸ್ ಬುಕ್ ನಲ್ಲಿ ಫೇಶಿಯಲ್ ರೆಕಗ್ನಿಷನ್ ಆಯ್ಕೆ ಸಿಗಲಿದೆ. ಹೀಗಾಗಿ ಇನ್ಮೇಲೆ ಪಾಸ್ ವರ್ಡ್ ಮರೆತು ಹೋಯ್ತಲ್ಲ. ಅಕೌಂಟ್ ಹ್ಯಾಕ್ ಆಗುತ್ತಲ್ಲ ಅನ್ನೋ ಚಿಂತೆ ಇರೋದಿಲ್ಲ. ಫೇಸ್ ಬುಕ್ ಅನ್ ಲಾಕಿಂಗ್ ಆಪ್ಷನ್ ಹೇಗಿರಲಿದೆ ಎಂಬುದು ರಿವೀಲ್ ಆಗಿದ್ದು, ಸ್ಕ್ರೀನ್ ಶಾಟ್ ಫೋಟೊ ಲೀಕ್ ಆಗಿದೆ.
ನಿಮ್ಮ ಫೇಸ್ ಬುಕ್ ಖಾತೆ ಓಪನ್ ಮಾಡಲು ನಮ್ಮ ಮುಖದ ಗುರುತನ್ನು ಗುರುತಿಸುವ ಮೂಲಕ ಫೇಸ್ ಬುಕ್ ಫೇಸ್ ಲಾಕ್ ಆಗುವ ವಿಶೇಷ ತಂತ್ರಜ್ಞಾನ ಕಂಡು ಹಿಡಿಯುತ್ತಿದೆ. ಹೀಗಾಗಿ ಇನ್ಮುಂದೆ ಗೆಳೆಯರಾಗಲಿ ಅಥವಾ ಕಿಡಿಗೇಡಿಗಳಾಗಲಿ ನಿಮ್ಮ ಖಾತೆಯಿಂದ ಬೇಡವಾದ ಪೋಸ್ಟ್ ಮಾಡುವ ಭಯ ಇರುವುದಿಲ್ಲ. ನಿಮ್ಮ ಖಾತೆ ಭದ್ರವಾಗಿರಲಿದೆ.
ಶೀಘ್ರವೇ ವೆರಿಫೈ ಆಗಿ ಓಪನ್ ಆಗುವ ಹೊಸ ತಂತ್ರಜ್ಞಾನದ ಪರೀಕ್ಷೆಯಲ್ಲಿ ನಾವು ತೊಡಗಿದ್ದೇವೆ. ಈಗಾಗಲೇ ಲಾಗ್ ಇನ್ ಹೊಂದಿರುವವರು ಈ ಆಯ್ಕೆಯ ಫೀಚರ್ ಅನ್ನು ಪಡೆಯಬಹುದು. ಖಾತೆದಾರರ ಮುಖವೇ ಪಾಸ್ ವರ್ಡ್ ಆಗಲಿದೆ. ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಫೇಸ್ ಬುಕ್ ಖಾತೆದಾರರಿಗೆ ಸುಲಭವಾಗಲಿದೆ ಎಂದು ಅಂತರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.