ನವದೆಹಲಿ: ಇರಾನ್-ಇರಾಖ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 135 ಕ್ಕೂ ಹೆಚ್ಚು ಜನ ಬಲಿಯಾಗಿದ್ದು, 1500 ಮಂದಿಗೆ ಗಾಯಗಳಾದ ವರದಿಯಾಗಿದೆ.
ನಿನ್ನೆ ತಡರಾತ್ರಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.3 ರಷ್ಟು ತೀವ್ರತೆ ದಾಖಲಾಗಿದೆ. ಉತ್ತರ ಇರಾಖ್ ನ ಸುಲೈಮಾನಿಯಾದಲ್ಲಿ ಅತೀ ಹೆಚ್ಚು ಹಾನಿಗಳಾಗಿವೆ. ರಾಖ್ ಗೆ ಸೇರಿದ ಭಾಗದಲ್ಲಿ 6 ಮಂದಿ ಸಾವಿಗೀಡಾದ ವರದಿಯಾಗಿದೆ.
ರಾತ್ರಿ ವೇಳೆ ಜನರು ಮನೆಯೊಳಗಿದ್ದ ವೇಳೆಯಲ್ಲೇ ಭೂಕಂಪ ಸಂಭವಿಸಿರುವುದರಿಂದ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ