ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಕಾಲದಲ್ಲಿ ಬ್ರಿಟನ್ ರಾಜಕುಮಾರಿ ಪ್ರಿನ್ಸ್ ಡಯಾನಾ ಜತೆ ಸೆಕ್ಸ್ ಮಾಡಬೇಕೆಂದು ಬಯಸಿದ್ದರಂತೆ. ಹಾಗಂತ ಸ್ವತಃ ಟ್ರಂಪ್ ರೇಡಿಯೋ ಸಂದರ್ಶನವೊಂದರಲ್ಲಿ ಹೇಳಿದ್ದಾಗಿ ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಒಂದೊಮ್ಮೆ ಡಯಾನಾರನ್ನು ಬಹುವಾಗಿ ಆರಾಧಿಸುತ್ತಿದ್ದ ತಾನು, ಆಕೆಗೆ ಎಚ್ ಐವಿ ಟೆಸ್ಟ್ ಮಾಡಿಸಬೇಕೆಂದು ಜೋಕ್ ಮಾಡುತ್ತಿದ್ದೆ ಎಂದು ಟ್ರಂಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಅವಕಾಶ ಸಿಕ್ಕರೆ ತಾನು ಡಯಾನಾ ಜತೆ ಮಲಗಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ. ಆಕೆ ಅದ್ಭುತ ಸುಂದರಿ ಎಂದು ಟ್ರಂಪ್ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ