ಸೆಕ್ಸ್ ಮಾಡು ಎಂದು ಒತ್ತಾಯಿಸುತ್ತಿದ್ದ ಮಾಲಕಿಯನ್ನ ಮನೆಗೆಲಸದ ಯುವಕ ಕೊಂದಿರುವ ಘಟನೆ ನವದೆಹಲಿಯ ಲಜಪತ್ ನಗರದಲ್ಲಿ ನಡೆದಿದೆ.
ಮನೆ ಮಾಲೀಕಳನ್ನ ಕೊಂದ ಯುವಕ ನೇರ ಪೊಲೀಸ್ ಠಾಣೆಗೆ ಹೋಗಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕೈ ಮತ್ತು ದೇಹವೆಲ್ಲ ರಕ್ತ ಮಾಡಿಕೊಂಡಿದ್ದ 16 ವರ್ಷದ ಯುವಕ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಪೊಲೀಸರು ವಿಚಾರಿಸಿದಾಗ ತನ್ನ ಮಾಲೀಕಳನ್ನೆ ಕೊಂದಿದ್ದಾನೆ ಹೇಳಿದ್ದಾನೆ. ಆದರೆ, ಹಣಕ್ಕಾಗಿ ಅಲ್ಲ, ನಿತ್ಯ ಸೆಕ್ಸ್`ಗಾಗಿ ಪೀಡಿಸುತ್ತಿದ್ದರಿಂದ ರೋಸಿಹೋಗಿ ಕೊಂದಿದ್ದಾಗಿ ಹೇಳಿದ್ದಾನೆ.
ಬಳಿಕ ಬಾಲಕನನ್ನ ಕರೆದುಕೊಂಡು ಕೊಲೆ ನಡೆದ ಸಂಗಮ್ ಅಪಾರ್ಟ್`ಮೆಂಟ್`ಗೆ ತೆರಳಿ ಪೊಲಿಸರು ಪರಿಶೀಲನೆ ನಡೆಸಿದ್ದಾರೆ. ಮನೆಗೆಲಸದ ಯುವಕ ಆಕೆಯನ್ನ ಕೊಂದಾಗ ಮಹಿಳೆ ಒಂಟಿಯಾಗಿದ್ದಳು. ಗಂಡ ಕೆಲಸಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ. ಯುವಕ ಹೇಳುವ ಪ್ರಕಾರ್, ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಹಲವು ದಿನಗಳಿಂದ ಮಹಿಳೆ ಹಿಂಸಿಸುತ್ತಿದ್ದಳು. ನಿನ್ನ ವರ್ತನೆ ನಿಲ್ಲಿಸದಿದ್ದರೆ ಕೊಂದು ಬಿಡುವುದಾಗಿ ಯುವಕ ಎಚ್ಚರಿಕೆ ನೀಡಿದ್ದನಂತೆ. ಆದರೂ ಆ ಮಹಿಳೆ ಕಾಮಚೇಷ್ಟೆ ನಿಂತಿರಲಿಲ್ಲ. ರೂಮೊಇನಲ್ಲಿ ಮಹಿಳೆ ಟಿವಿ ನೋಡುತ್ತಾ ಕುಳಿತಿದ್ದಾಗ ಡುಗೆಮನೆಯಿಂದ ಚಾಕು ತಂದ ಯುವ ಕುತ್ತಿಗೆ ಸೀಳಿ ಕೊಂದಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ