Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನ ಕ್ರಿಯೆ ಮಿತಿ ಮೀರಿದರೆ ಈ ತೊಂದರೆಗಳು ಬರುವುದಂತು ಗ್ಯಾರಂಟಿ!

ಮಿಲನ ಕ್ರಿಯೆ ಮಿತಿ ಮೀರಿದರೆ ಈ ತೊಂದರೆಗಳು ಬರುವುದಂತು ಗ್ಯಾರಂಟಿ!
ಬೆಂಗಳೂರು , ಭಾನುವಾರ, 25 ಮಾರ್ಚ್ 2018 (06:55 IST)
ಬೆಂಗಳೂರು : ಸೆಕ್ಸ್ ಎನ್ನುವುದು ಪ್ರತೀ ಮನುಷ್ಯನಿಗೂ ಅತ್ಯವಶ್ಯಕ. ಆದರೆ ಅತಿಯಾದರೆ ಅಮೃತ  ಕೂಡ ವಿಷವೆಂದು ಹಿರಿಯರು ಹೇಳುತ್ತಾರೆ. ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಬಯೋ ಹ್ಯಾಕರ್ಸ್ ಹೇಳುವ ಪ್ರಕಾರ ಪ್ರತೀ ದಿನ ನಾಲ್ಕಕ್ಕಿಂತಲೂ ಅಧಿಕ ಬಾರಿ ಶೃಂಗಾರದಲ್ಲಿ ಭಾಗವಹಿಸಿದರೆ ಈ ತೊಂದರೆಗಳು ಬರುತ್ತವಂತೆ.


*ಶೃಂಗಾರದಲ್ಲಿ ಪಾಲ್ಗೊಂಡ ಸಮಯದಲ್ಲಿ DHT (ಡಿ ಹೈಡ್ರೋ ಟೆಸ್ಟೋ ಸ್ಟೀರಾನ್) ಎಂಬ ಹಾರ್ಮೋನ್ ಅಧಿಕವಾಗಿ ಉತ್ಪತ್ತಿಯಾಗುತ್ತದೆ ಈ DHT ಎಂಬ ಹಾರ್ಮೋನ್  ಕಣ್ಣಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳನ್ನೂ ಕೂಡ ಉತ್ತೇಜಿಸುತ್ತದಂತೆ. ಆದ ಕಾರಣ ಕಣ್ಣಿನ ದೃಷ್ಟಿ ಕಡಿಮೆಯಾಗುವ ಸಾಧ್ಯತೆಯಿದೆಯಂತೆ.

*DHT ಎಂಬ ಹಾರ್ಮೋನ್ ತಲೆಕೂದಲ ಬುಡವನ್ನು ಉತ್ತೇಜಿಸುತ್ತದೆ ಈ ಕಾರಣದಿಂದಾಗಿ ಬೋಳು ತಲೆ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದೆಯಂತೆ.

*ಉಸಿರಾಟದ ತೊಂದರೆ ಇರುವವರು ಅದೇ ಕೆಲಸವಾಗಿ ಶೃಂಗಾರದಲ್ಲಿ ಪಾಲ್ಗೊಂಡರೆ ರತಿ ಸುಖ ತಾರಕಕ್ಕೇರಿದಾಗ ಉಸಿರಾಡುವುದು ಕಷ್ಟವಾಗಿ ಹೃದಯದ ಮೇಲೆ ಒತ್ತಡ ಹೆಚ್ಚಾಗಿ ಹೃದಯಾಘಾತ ವಾಗುವ ಸಾಧ್ಯತೆ ಇದೆಯೆಂದು ಬಯೋ ಹ್ಯಾಕರ್ಸ್ ಹೇಳುತ್ತಾರೆ.

ಹಾಗೇ ಶೃಂಗಾರದಲ್ಲಿ ಪಾಲ್ಗೊಳ್ಳದಿದ್ದರೂ ಅನೇಕ ಅನರ್ಥಗಳು ಉಂಟಾಗುವುದರಿಂದ  ದಿನಕ್ಕೆ ನಾಲಕ್ಕಿಂತಲೂ ಹೆಚ್ಚು ಭಾರಿ ಪಾಲ್ಗೊಳ್ಳದಿರುವುದೇ ಉತ್ತಮವೆಂದು ಡಾಕ್ಟರ್ ಗಳು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಎರಡು ಬಣ್ಣದ ಕೋಳಿ ಮೊಟ್ಟೆಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂದು ತಿಳಿಬೇಕಾ?