Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ ಹ್ಯಾಪೀ ಬರ್ತ್ ಡೇ ಎಂದ ಡೊನಾಲ್ಡ್ ಟ್ರಂಪ್

Modi-Trump

Krishnaveni K

ನವದೆಹಲಿ , ಬುಧವಾರ, 17 ಸೆಪ್ಟಂಬರ್ 2025 (09:26 IST)
ನವದೆಹಲಿ: ಸುಂಕ ಸಮರದ ತಿಕ್ಕಾಟದ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಪ್ರಧಾನಿ ಮೋದಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.
 

ರಷ್ಯಾ ಜೊತೆ ತೈಲ ಖರೀದಿ ಮಾಡುತ್ತಿರುವುದಕ್ಕೆ ಭಾರತದ ಮೇಲೆ ಮುನಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಶೇ.50 ರಷ್ಟು ಸುಂಕ ವಿಧಿಸಿ ಸೇಡು ತೀರಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಭಾರತದ ಮೇಲೆ ಕೆಂಡ ಕಾರುತ್ತಿದ್ದರು. ಆದರೆ ಯಾವಾಗ ಭಾರತ ಸೊಪ್ಪೇ ಹಾಕಲಿಲ್ಲವೋ ಆಗ ಕೊಂಚ ಮೆತ್ತಗಾದರು. ಮೋದಿ ನನ್ನ ಫ್ರೆಂಡ್ ಎಂದು ಹಳೆಯ ರಾಗ ಎಳೆದರು.

ಇದೀಗ ಇಂದು ಮೋದಿ ಜನ್ಮದಿನದ ನಿಮಿತ್ತ ಟ್ರಂಪ್ ಶುಭಾಶಯ ಕೋರಿದ್ದಾರೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಮಾತನಾಡಿದ್ದಾರೆ. ಉಭಯ ದೇಶಗಳ ಬಗ್ಗೆ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧ, ಪಾಲುದಾರಿಕೆ ಬಲಪಡಿಸುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು ನನ್ನ ಸ್ನೇಹಿತ ಮೋದಿ ಜೊತೆ ಅದ್ಭುತ ಸಂಭಾಷಣೆ ನಡೆಯಿತು.ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಬರ್ತ್ ಡೇ: ಇಂದೇ ಮಹತ್ವದ ಕೆಲಸ ಮಾಡಲಿದ್ದಾರೆ ನಮೋ