ಸಿಯೋಲ್ : ಹೋಟೆಲ್ ಗೆ ಬಂದು ತಂಗುವ ಅತಿಥಿಗಳ ಖಾಸಗಿ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಆ ವಿಡಿಯೋವನ್ನು ಪೊರ್ನ್ ವೆಬ್ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದ ಪ್ರಕರಣವೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿದೆ.
ದಕ್ಷಿಣ ಕೊರಿಯಾದ 42 ಹೊಟೆಲ್ ರೂಮ್ಗಳಲ್ಲಿ ಇವರು ಕ್ಯಾಮರಾ ಫಿಕ್ಸ್ ಮಾಡಿದ್ದರು. ಆದರೆ ಅವರು ಕ್ಯಾಮರಾ ಫಿಕ್ಸ್ ಮಾಡುತ್ತಿದ್ದದ್ದು ಗೊಡೆಗಾಗಲಿ ಅಥವಾ ಬಾತ್ರೂಮ್ ನಲ್ಲಾಗಲಿ ಅಲ್ಲ ಬದಲಾಗಿ ಟಿವಿ, ಹೇರ್ ಡ್ರೈಯರ್, ಗಡಿಯಾರ ಹೀಗೆ ಯಾರೂ ಊಹಿಸದೇ ಇರದ ಜಾಗದಲ್ಲಿ ಕ್ಯಾಮರಾಗಳನ್ನು ಅಡಗಿಸಿಡುತ್ತಿದ್ದರು.
ರೆಕಾರ್ಡ್ ಮಾಡಿದ ವಿಡಿಯೋವನ್ನು ತಮ್ಮ ಆನ್ ಲೈನ್ನಲ್ಲಿ ಹರಿಬಿಡುತ್ತಿದ್ದರು. ಹೀಗೆ ಇವರು ಬರೋಬ್ಬರಿ 800 ಜೋಡಿಗಳಿಗೆ ಈ ರೀತಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಯ ಕೂಡ ಬರುತ್ತಿತ್ತು. ಸದ್ಯ ಇದೀಗ ಇವರು ಪೊಲೀಸರ ಅತಿಥಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.