ಇಂಗ್ಲೆಂಡ್ : ಆತಂಕ, ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಕಳೆದ 15 ವರ್ಷಗಳಿಂದ ಟಾಲ್ಕಮ್ ಪೌಡರ್ ತಿನ್ನುತ್ತಿದ್ದಾಳೆ ಎಂಬ ಶಾಕಿಂಗ್ ವಿಚಾರ ತಿಳಿದುಬಂದಿದೆ.
44 ವರ್ಷದ ಲಿಸಾ ಆಂಡರ್ಸನ್ ಎಂಬ ಮಹಿಳೆಗೆ 2004 ರಲ್ಲಿ ತನ್ನ ಚಿಕ್ಕ ಮಗನಿಗೆ ಟಾಲ್ಕಮ್ ಪೌಡರ್ ಹಚ್ಚುತ್ತಿದ್ದ ವೇಳೆ ಅದನ್ನು ತಿನ್ನಬೇಕೆಂಬ ಹಂಬಲ ಪ್ರಾರಂಭವಾಗಿದ್ದು, ಈಗ ಇದು ಆಕೆಯ ಪ್ರತಿದಿನದ ಆಹಾರವಾಗಿದೆಯಂತೆ. ಈಕೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಸೇವಿಸುತ್ತಿದ್ದು, ಉಳಿದ ವೇಳೆಯಲ್ಲಿ ಈಕೆ ಟಾಲ್ಕಮ್ ಪೌಡರ್ ನ್ನು ಆಹಾರವಾಗಿ ಸೇವಿಸುತ್ತಾಳಂತೆ. ಅದಕ್ಕಾಗಿ ಈಕೆ 7.5ಲಕ್ಷ ಖರ್ಚು ಮಾಡಿದ್ದಾಳಂತೆ.
ಈಕೆಯ ಸ್ಥಿತಿಯನ್ನು ಕಂಡು ವೈದ್ಯರು ಈಕೆಗೆ ಕಬ್ಬಿಣದ ಕೊರತೆ, ಒಸಿಎ ಮತ್ತು ಪಿಕಾ ಸಿಂಡ್ರೋಮ್ (ಆಹಾರೇತರ ವಸ್ತುಗಳನ್ನು ತಿನ್ನುವುದು) ನ ಪರಿಣಾಮವಾಗಿರಬಹುದೆಂದು ಊಹಿಸಿದ್ದಾರೆ.