ಜರ್ಮನಿ : ಸಾಲ ವಸೂಲಿಗಾಗಿ ನಾಯಿಯನ್ನು ಹರಾಜಿಗಿಟ್ಟು ಹಣ ಪಡೆದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಜರ್ಮನಿಯಲ್ಲಿ ನೆಲೆಸಿದ್ದ ಕುಟುಂಬವೊಂದು ವ್ಯಕ್ತಿಯೊಬ್ಬನ ಬಳಿ ಸಾಲ ಮಾಡಿದ್ದರು. ಆದರೆ ಆ ಸಾಲ ತೀರಿಸಲು ಕುಟುಂಬದವರಿಗೆ ಸಾಧ್ಯವಾಗದ ಕಾರಣ ಬಾಕಿ ವಸೂಲಿಗಾರ ಆ ಕುಟುಂಬದಲ್ಲಿರುವ ಬೆಲೆಬಾಳುವ ವಸ್ತು ಕೊಂಡೊಯ್ದು ಬಾಕಿ ಹಣ ಚುಕ್ತಾ ಮಾಡಿಕೊಳ್ಳಲು ನಿರ್ಧರಿಸಿದ.
ಆ ಹಿನ್ನಲೆಯಲ್ಲಿ ಮನೆಗೆ ಬಂದ ಆತ ಆ ಕುಟುಂಬದವರ ಬಳಿ ಇದ್ದ ಪಗ್ ಥಳಿಯ ನಾಯಿಯನ್ನು ಕೊಂಡೊಯ್ದು ಇ-ಬೇನಲ್ಲಿ ಹರಾಜಿಗೆ ಹಾಕಿ 60 ಸಾವಿರ ರೂ. ಗಳಿಸಿ, ಆ ಹಣದಿಂದ ಬಾಕಿ ವಸೂಲಿ ಮಾಡಿಕೊಂಡ. ಇದು ಜರ್ಮನಿಯ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.