ಪ್ಲೋರಿಡಾ: ಮನೆಯ ಹಿತ್ತಲಿನಲ್ಲಿದ್ದ ಈಜುಕೊಳದಲ್ಲಿ ಬರುತ್ತಿದ್ದ ಶಬ್ಧಕ್ಕೆ ಎಚ್ಚರಗೊಂಡ ಮಹಿಳೆಯೊಬ್ಬಳು ಈಜುಕೊಳದ ಬಳಿ ಹೋದಾಗ ಅಲ್ಲಿಇರುವುದನ್ನು ಕಂಡು ಒಂದು ಕ್ಷಣ ಆಘಾತಗೊಂಡಿದ್ದಾಳೆ.
ಹೌದು. ಪ್ಲೋರಿಡಾದ ಕೆರ್ರಿ ಕಿಬ್ಬೆ ಎಂಬಾಕೆ ರಾತ್ರಿ ಮಲಗಿದಾಗ ಬೆಳಿಗ್ಗೆ 2 ಗಂಟೆ ಸುಮಾರಿಗೆ ಈಜುಕೊಳದಿಂದ ಶಬ್ಧ ಕೇಳಿಸುತ್ತಿತ್ತು. ತಕ್ಷಣ ಎಚ್ಚರಗೊಂಡ ಆಕೆ ಮನೆಯ ಲೈಟ್ ಗಳನ್ನು ಆನ್ ಮಾಡಿ, ಮಲಗುವ ಕೋಣೆಯ ಕಿಟಕಿಯಿಂದ ನೋಡಿದ್ರೆ ಏಳು ಅಡಿ ಉದ್ದದ ಮೊಸಳೆ ಈಜುಕೊಳದಲ್ಲಿತ್ತು.
ಮೊಸಳೆಗೆ ಕೊಳದಂದ ಹೊರಬರಲು ದಾರಿ ಮಾಡಿಕೊಡಬೇಕೆಂದುಕೊಂಡ ಆಕೆಗೆ ತಕ್ಷಣ ಮನೆಯಲ್ಲಿ ಮಕ್ಕಳು ಹಾಗೂ ನಾಯಿ ಇರುವುದರಿಂದ ಅವರ ಸುರಕ್ಷತೆಗಾಗಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಳು. ಬಳಿಕ ಈಜುಕೊಳದಿಂದ ಮೊಸಳೆಗೆ ಹಗ್ಗ ಕಟ್ಟಿ ಹೊರ ಎಳೆಯಲಾಯ್ತು. ಸಮೀಪದಲ್ಲೇ ಇದ್ದ ಫಾರಂನಲ್ಲಿ ಅದನ್ನು ಬಿಡಲಾಯ್ತು.
ಪ್ಲೋರಿಡಾದಲ್ಲಿ ಮೊಸಳೆಗಳ ಹಾವಳಿ ಸಾಮಾನ್ಯ ವಿಚಾರ. ಆದರೆ ಮನೆಯ ಹಿಂದೆ ಕಾಡಿದ್ದ ಕಾರಣ ಮೊಸಳೆ ಅಲ್ಲಿಂದ ಬಂದಿರುವ ಸಾಧ್ಯತೆ ಇದೆ. ಕಾಡು ಮತ್ತು ಮನೆ ಮಧ್ಯದಲ್ಲಿ ಬೇಲಿ ಹಾಕಲಾಗಿತ್ತು. ಆದರೆ 2017ರಲ್ಲಿ ಇರ್ಮಾ ಚಂಡಮಾರುತ ಎಲ್ಲವನ್ನು ನಾಶ ಮಾಡಿದೆ ಎಂದು ಕೆರ್ರಿ ಹೇಳಿದ್ದಾರೆ.