ಪ್ಲೋರಿಡಾ : ಮನುಷ್ಯನ ಕೆಟ್ಟ ಚಟಗಳಿಗೆ ಆತ ಮಾತ್ರ ಅಲ್ಲ ಮೂಕ ಪ್ರಾಣಿ ಪಕ್ಷಿಗಳು ಬಲಿಯಾಗುತ್ತಿದ್ದಾವೆ ಎಂಬುದಕ್ಕೆ ಫ್ಲೋರಿಡಾದ ಕಡಲ ತೀರವೊಂದರಲ್ಲಿ ಫೋಟೊಗ್ರಾಫರ್ ತೆಗೆದ ಈ ಫೋಟೋವೇ ಪ್ರಮುಖ ಸಾಕ್ಷಿ.
ಹೌದು. ಫ್ಲೋರಿಡಾದ ಕಡಲ ತೀರದಲ್ಲಿ ಕಪ್ಪು ಬಣ್ಣದ ಸ್ಕಿಮ್ಮರ್ ಹಕ್ಕಿಯು ತನಗರಿವಿಲ್ಲದೇ ತನ್ನ ಮರಿಗೆ ಆಹಾರದ ಬದಲಾಗಿ ಯಾರೋ ಸೇದಿಬಿಟ್ಟ ಸಿಗರೇಟಿನ ತುದಿಯನ್ನು ಮರಿಯ ಬಾಯಲ್ಲಿ ಇಡುತ್ತಿತ್ತು. ಈ ದೃಶ್ಯವನ್ನು ಕರೆನ್ ಮಸನ್ ಎಂಬುವವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಫೇಸ್ ಬುಕ್ ನಲ್ಲಿ ಆ ಫೋಟೊವನ್ನು ಹಂಚಿಕೊಂಡಿದ್ದಾರೆ.
ತಾಯಿ ಪಕ್ಷಿ ಮರಿಗೆ ಏನನ್ನಾದರೂ ಕೊಡುವುದನ್ನು ನಾನು ನೋಡಿದ್ದೆ. ಅದು ಮೀನು ಅಲ್ಲ ಎಂದು ನನಗೆ ತಿಳಿದಿತ್ತು. ಆದರೆ ಏನು ಎಂದು ಮೊದಲು ಗೊತ್ತಾಗಲಿಲ್ಲ. ಮನೆಗೆ ಬಂದ ನಂತರ ಕಂಪ್ಯೂಟರ್ನಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಸಿಗರೇಟ್ ತುದಿ ಎಂಬುದು ಸ್ಪಷ್ಟವಾಯಿತು ಎಂದು ಆ ಫೋಟೊಗ್ರಾಫರ್ ತಿಳಿಸಿದ್ದಾರೆ.