ಲಂಡನ್: ಇಂಗ್ಲೆಂಡಿನಲ್ಲಿ ನೆಲಸಿರುವ ಭಾರತೀಯ ಮೂಲದ ಮೆಹುಲ್ ಗರ್ಗ್( 10) ವರ್ಷದ ಬಾಲಕ, ಮೆನ್ಸಾ ಬುದ್ಧಿಮತ್ತೆ(ಐಕ್ಯೂ) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾನೆ. ವಿಶ್ವ ವಿಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ವೀಫನ್ ಹಾಕಿಂಗ್ ಅವರನ್ನೂ ಮೀರಿಸಿದ್ದಾನೆ.
ಕಳೆದ ವರ್ಷ ಮೆಹುಲ್ ಗರ್ಗ್‌ನ ಸಹೋದರ 13 ವರ್ಷದ ಧ್ರುವ್ ಗರ್ಗ್ ಮೆನ್ಸಾ ಬುದ್ಧಿಮತ್ತೆ(ಐಕ್ಯೂ) ಪರೀಕ್ಷೆಯಲ್ಲಿ 162 ಅಂಕಗಳನ್ನು ಗಳಿಸಿದ್ದ. ಅವನ ಹಾದಿಯಲ್ಲೇ ಸಾಗಿರುವ ಆತನ ತಮ್ಮ ಮೆಹುಲ್ ಕೂಡ 162 ಅಂಕಗಳನ್ನು ಗಳಿಸಿದ್ದಾನೆ. ಇಡೀ ಜಗತ್ತಿನಲ್ಲೇ ಶೇ.1ರಷ್ಟು ಮಂದಿ ಮಾತ್ರ ಈ ಮಟ್ಟದ ಐಕ್ಯೂ ಹೊಂದಿರುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ