ಮೆಕ್ಸಿಕೋ : ಮಾಜಿ ಗೆಳತಿ ಮೇಲೆ ಕಣ್ಣಿಡಲು 50 ವರ್ಷದ ವ್ಯಕ್ತಿಯೊಬ್ಬ ಸುರಂಗ ತೋಡಿ ಪೊಲೀಸರ ಬಲೆಗೆ ಸಿಲುಕಿಕೊಂಡ ಘಟನೆ ಉತ್ತರ ಮೆಕ್ಸಿಕೋದಲ್ಲಿ ನಡೆದಿದೆ.
ಈ ವ್ಯಕ್ತಿಗೆ 14 ವರ್ಷಗಳ ಹಿಂದೆ ಮಹಿಳೆಯೊಬ್ಬಳ ಜೊತೆ ಪ್ರೇಮಾಂಕುರವಾಗಿತ್ತು. ನಂತರ ಇಬ್ಬರು ಬೇರೆ ಬೇರೆಯಾಗಿದ್ದರು. ಅಲ್ಲದೇ ಈತ ಹಿಂಸೆ ನೀಡುತ್ತಿದ್ದ ಕಾರಣ ಆತನ ವಿರುದ್ಧ ಆಕೆ ದೂರು ಕೂಡ ನೀಡಿದ್ದಕ್ಕೆ ಕೋರ್ಟ್ ಕೂಡ ಮಹಿಳೆಯಿಂದ ದೂರವಿರುವಂತೆ ಸೂಚನೆ ನೀಡಿತ್ತು.
ಆದರೆ ಇದ್ಯಾವುದನ್ನು ಲೆಕ್ಕಿಸದ ವ್ಯಕ್ತಿ ಪ್ರೇಯಸಿ ಮೇಲೆ ಕಣ್ಣಿಡಲು ಆಕೆಯ ಮನೆಯೊಳಗೆ ಸುರಂಗ ತೋಡಿದ್ದಾನೆ. ಮಹಿಳೆ ಮನೆ ಅಡಿ ಭಾಗದಲ್ಲಿ ಬರುತ್ತಿರುವ ಶಬ್ಧ ಕೇಳಿ ಕೆಳಗಡೆ ನೋಡಿದಾಗ ಸುರಂಗ ಕಾಣಿಸಿದ್ದಲ್ಲದೇ ವ್ಯಕ್ತಿ ಕೂಡ ಅದರಲ್ಲಿ ಸಿಕ್ಕಿಬಿದ್ದಿದ್ದಾನೆ. ಆಗ ಆಕೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬಂದು ವ್ಯಕ್ತಿಯನ್ನು ಹೊರಗೆ ತೆಗೆದು ಬಂಧಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.