Webdunia - Bharat's app for daily news and videos

Install App

ಗೂಗಲ್ ನಲ್ಲಿ ಭಿಕ್ಷುಕ ಎಂದು ಸರ್ಚ್ ಮಾಡಿದರೆ ಯಾರ ಫೋಟೋ ಕಾಣಿಸುತ್ತೆ ಗೊತ್ತೇ?

Webdunia
ಬುಧವಾರ, 19 ಡಿಸೆಂಬರ್ 2018 (07:30 IST)
ಪಾಕಿಸ್ತಾನ : ಕಳೆದ ದಿನಗಳ ಹಿಂದೆ ಗೂಗಲ್ ನಲ್ಲಿ ಈಡಿಯಟ್ ಎಂದು ಸರ್ಚ್ ಮಾಡಿದರೆ ಡೊನಾಲ್ಡ್ ಟ್ರಂಪ್ ಫೋಟೊ ಕಾಣಿಸುತ್ತಿತ್ತು. ಆದರೆ ಇದೀಗ ಗೂಗಲ್ ನಲ್ಲಿ ಭಿಕ್ಷುಕ ಎಂದು  ಸರ್ಚ್ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಕಾಣಿಸುತ್ತಿದೆ.


ಹೌದು. ಕಳೆದ ಬಾರಿ  ಗೂಗಲ್ ನಲ್ಲಿ ‘ಈಡಿಯಟ್’ ಎಂದು ಸರ್ಚ್ ಮಾಡಿದರೆ ಟ್ರಂಪ್ ಫೋಟೊ ಕಾಣಿಸುತ್ತಿತ್ತು. ಈ ಬಗ್ಗೆ ಅಮೆರಿಕದ ಕಾಂಗ್ರೆಸ್‌ ಗೂಗಲ್ ಸಿಇಒ ಸುಂದರ್ ಪಿಚೈರನ್ನು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ್ದ ಸಿಇಒ ಸುಂದರ್,’ ಜನ ಹೆಚ್ಚಾಗಿ ಗೂಗಲ್‌ ಸೈಟ್‌ಗಳಿಗೆ ಅಪ್‌ಲೋಡ್‌ ಮಾಡುವ ಫೋಟೋಗಳಿಗೆ ಕೊಡುವ ಫೈಲ್‌ನೇಮ್‌ಗಳು ಇದಕ್ಕೆ ಕಾರಣ ಎಂದು ಹೇಳಿದ್ದರು.


ಆದರೆ ಇದೀಗ ಗೂಗಲ್ ನಲ್ಲಿ ‘ಭಿಕ್ಷುಕ’ ಎಂದು  ಸರ್ಚ್ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಕಾಣಿಸುತ್ತಿದೆ. ಈ ವಿಚಾರವನ್ನು ಇದೀಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿಧಾನಸಭೆ ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚೈ ಮುಂದೆ ಪ್ರಸ್ತಾಪಿಸಲು ಮುಂದಾಗಿದೆ.


ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಕುಸಿತ ಕಂಡಿದೆ. ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲು ಸಾಲ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಇಮ್ರಾನ್ ಖಾನ್ ಹಲವಾರು ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಆದಕಾರಣ ಭಿಕ್ಷುಕ ಎಂದು  ಸರ್ಚ್ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಕಾಣಿಸುತ್ತಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments