ಯುದ್ಧೋನ್ಮಾದಲ್ಲಿರುವ ನೆರೆಯ ಚೀನಾ ದಿನದಿಂದ ದಿನಕ್ಕೆ ಭಾರತದ ಮೇಲಿನ ಆರೋಪಗಳ ಪಟ್ಟಿಯನ್ನ ಹೆಚ್ಚಿಸುತ್ತಲೇ ಇದೆ. ದೊಕ್ಲಾಮ್ ಪ್ರದೇಶ ಭೂತಾನ್`ಗೆ ಸೇರಿದ್ದೆಂಬ ಭಾರತದ ವಾದದಲ್ಲಿ ಯಾವುದೇ ಹುರುಳಿಲ್ಲ. ದೊಕ್ಲಾಮ್ ಪ್ರದೇಶ ಚೀನಾಕ್ಕೆ ಸೇರಿದ್ದೆಂಬ ಬಗ್ಗೆ ನಮ್ಮ ಬಳಿ ಹಲವು ಹಳೆಯ ದಾಖಲೆಗಳಿವವೆ. ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ಪೊಲಿಟಿಕಲ್ ಕೌನ್ಸಿಲರ್ ಲಿಯಾ ವಿಡಿಯೋ ಹೇಳಿಕೆಯಲ್ಲಿ ಸಮರ್ಥನೆ ನೀಡಿದ್ದಾರೆ.
ದೊಕ್ಲಾಮ್ ಪ್ರದೇಶದಲ್ಲಿ ಭಾರತ-ಚೀನಾ ಮಿಲಿರಿ ನಡುವೆ ಏರ್ಪಟ್ಟಿರುವ ಪ್ರಕ್ಷುಬ್ಧ ವಾತಾವರಣ ತಿಳಿಯಾಗಲಿ ಭಾರತ, ದೊಕ್ಲಾಮ್`ನಲ್ಲಿ ನಿಯೋಜಿಸಿರುವ ಸೇನೆಯನ್ನ ಬೇಷರತ್ತಾಗಿ ಹಿಂಪಡೆಯಬೇಕೆಂದು ಲಿಯಾ ಹೇಳಿದ್ಧಾರೆ.
ಭಾರತ-ಚೀನಾ ಮತ್ತು ಭೂತಾನ್-ಚೀನಾ ಗಡಿಯಲ್ಲಿ ಹಲವು ಭಾರೀ ಹೋಗಿ ಬಂದಿದ್ದೇನೆ. ದೊಕ್ಲಾಮ್ ಪ್ರದೇಶದ ಬಗ್ಗೆ ನನಗೆ ಪ್ರತ್ಯಕ್ಷ ಜ್ಞಾನವಿದೆ. 1890ರಲ್ಲಿ ಪ್ರದೇಶವನ್ನ ಪ್ರತ್ಯೇಕಿಸಲಾಗಿದೆ.ಚೀನಾದ ನೆಲದ ಪರಮಾಧಿಕಾರಕ್ಕೆ ಭಾರತಕ್ಕೆ ಧಕ್ಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ನನಗೆ ತಿಳಿದಿರುವ ಪ್ರಕಾರ, ಭಾರತ-ಚೀನಾ ಮತ್ತು ಚೀನಾ-ಭೂತಾನ್ ಗಡಿ ಸಂಬಂಧಿಸಿದ ಕೆಲಸ ಹಲವು ದಶಕಗಳಿಂದ ನಡೆಯುತ್ತಿದ್ದು, ಭಾರತದ ವಾದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.ಚೀನಾ ಭಾರತಕ್ಕೆ ಸೇರಿದ್ದೆಂದು ಹೇಳಲಲು ನಮ್ಮ ಬಳಿ ಪ್ರಬಲ ಸಾಕ್ಷ್ಯಗಳಿವೆ ಎಂದಿದ್ಧಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ