Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೊಳ್ಳೊಟ್ಟೆ ಪೊಲೀಸರಿಗೆ ಇನ್ನು ಕಾದಿದೆ ಗ್ರಹಚಾರ

ಡೊಳ್ಳೊಟ್ಟೆ ಪೊಲೀಸರಿಗೆ ಇನ್ನು ಕಾದಿದೆ ಗ್ರಹಚಾರ
NewDelhi , ಗುರುವಾರ, 6 ಜುಲೈ 2017 (10:03 IST)
ನವದೆಹಲಿ: ಪೊಲೀಸ್ ಅಧಿಕಾರಿಗಳೆಂದರೆ ಸಾಮಾನ್ಯವಾಗಿ ವ್ಯಂಗ್ಯ ಚಿತ್ರಗಳಲ್ಲಿ ದಪ್ಪ ಹೊಟ್ಟೆಯವರೆಂದೇ ಜನಪ್ರಿಯರು. ಆದರೆ ಇನ್ನು ಮುಂದೆ ಪೊಲೀಸರಿಗೆ ದಪ್ಪ ಹೊಟ್ಟೆ ಇರುವಂತಿಲ್ಲ!


ಹೌದು, ಚೆನ್ನಾಗಿ ಉಂಡು ತಿಂದು ಮೈ ಬೆಳೆಸಿಕೊಳ್ಳುವ ಪೊಲೀಸರಿಗೆ ಇನ್ನು ಸಂಕಷ್ಟ ತಪ್ಪಿದ್ದಲ್ಲ. ದಪ್ಪ ಹೊಟ್ಟೆಯ, ದಡೂತಿ ದೇಹದ ಪೊಲೀಸರಿಗೆ ಬಡ್ತಿ ಇಲ್ಲ ಎನ್ನುವ ಹೊಸ ನಿರ್ಣಯವೊಂದು ಸದ್ಯದಲ್ಲೇ ಹೊರಬರಲಿದೆ. ಇದಕ್ಕಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಗೃಹ ಇಲಾಖೆಯ ಸೂಚನೆ ಮೇರೆ ಕರಡು ನಿಯಮ ರೂಪಿಸಿದೆ.

ಈ ಕರಡು ಪ್ರತಿಯನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ. ಈ ಕರಡು ನಿಯಮದ ಪ್ರಕಾರ, ಯಾವ ಐಪಿಎಸ್ ಅಧಿಕಾರಿ ದೈಹಿಕವಾಗಿ ಫಿಟ್ ಆಗಿರುತ್ತಾರೋ, ಅವರಿಗಷ್ಟೇ ಬಡ್ತಿ ಸಿಗಲಿದೆ. ಕೇಂದ್ರ ಗೃಹ ಇಲಾಖೆ ಸೂಚಿಸಿದ ರೀತಿಯಲ್ಲಿ ಫಿಟ್ ನೆಸ್ ಹೊಂದಿದ್ದವರಿಗೆ ಮಾತ್ರ ಬಡ್ತಿ.

ಸದ್ಯಕ್ಕೆ ದೇಶದಲ್ಲಿ ಸೇವಾ ಹಿರಿತನದ ಆಧಾರದಲ್ಲಿ ಬಡ್ತಿ ನೀಡಲಾಗುತ್ತಿದೆ. ಇನ್ನು ಮುಂದೆ ಫಿಟ್ ನೆಸ್ ಆಧಾರದಲ್ಲಿ ಹುದ್ದೆ ಸಿಗಲಿದೆ. ಅಲ್ಲದೆ ಐಪಿಎಸ್ ಅಧಿಕಾರಿಗಳು ಸಶಸ್ತ್ರ ಪಡೆಗಳಂತೆ ಕ್ರೈಮ್, ಭಯೋತ್ಪಾದನೆ ನಿಯಂತ್ರಣ,  ಅಪರಾಧ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಸೇವೆ ಸಲ್ಲಿಸಬೇಕು. ನಿಗದಿತ ಸಮಯದಲ್ಲೇ ಐಪಿಎಸ್ ತರಬೇತಿ ಮುಗಿಸಬೇಕು ಎಂಬಿತ್ಯಾದಿ ಹೊಸ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಗೃಹ ಇಲಾಖೆ ಉದ್ದೇಶಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ವಿರುದ್ಧ ಭಾರೀ ಅಸ್ತ್ರ ಪ್ರಯೋಗಿಸುವುದಾಗಿ ಎಚ್ಚರಿಸಿದ ಚೀನಾ