ನವದೆಹಲಿ : ಚೀನಾದವರು ಭಾರತದ ಮೇಲೆ ಕೇವಲ ಗಡಿ ತಂಟೆಯ ಮೂಲಕವಷ್ಟೇ ಅಲ್ಲ, ವಿದ್ಯುತ್ ಗ್ರಿಡ್ಗಳ ಮೇಲೂ ದಾಳಿ ನಡೆಸಲು ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ.
ಚೀನಾ ಗಡಿ ತಗಾದೆಯ ಪ್ರಮುಖ ಕೇಂದ್ರವಾಗಿರುವ ಗಡಿ ಪ್ರದೇಶ ಲಡಾಖ್ ಹಾಗೂ ಉತ್ತರ ಭಾರತದಲ್ಲಿನ 7 ಪವರ್ ಗ್ರಿಡ್ಗಳ ತಂತ್ರಾಂಶಕ್ಕೆ ಚೀನಿ ಹ್ಯಾಕರ್ಗಳು ಕನ್ನ ಹಾಕಿ, ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸಿದ್ದಾರೆ. ಆದರೆ ಈ ಯತ್ನ ವಿಫಲವಾಗಿದೆ.
ರೆಕಾರ್ಡೆಡ್ ಫ್ಯೂಚರ್ಎಂಬ ಖಾಸಗಿ ಗುಪ್ತಚರ ಸಂಸ್ಥೆ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ವರದಿ ಪ್ರಕಟಿಸಿದೆ. ಹ್ಯಾಕಿಂಗ್ ಯತ್ನ ನಡೆದಿದ್ದನ್ನು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಕೂಡ ಖಚಿತಪಡಿಸಿದ್ದಾರೆ.
ಚೀನಾ ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ಕಳೆದ ಆಗಸ್ಟ್ನಿಂದ ಈ ವರ್ಷದ ಮಾಚ್ರ್ವರೆಗೆ ಹ್ಯಾಕಿಂಗ್ಗೆ ಯತ್ನ ನಡೆಸಿದ್ದಾರೆ. ಭಾರತದ ವಿದ್ಯುತ್ ವಿತರಣಾ ಕೇಂದ್ರಗಳ ದತ್ತಾಂಶವು ಚೀನಾ ಪ್ರಾಯೋಜಿತ ಕಮಾಂಡ್ ಹಾಗೂ ಸರ್ವರ್ಗಳಿಗೆ ವರ್ಗ ಆಗುತ್ತಿತ್ತು.
ಭಾರತದ ಈ ಪ್ರಮುಖ ಮೂಲಸೌಕರ್ಯ ಘಟಕಗಳ ಮಾಹಿತಿಯನ್ನು ಕಳ್ಳತನದ ಮೂಲಕ ಸಂಗ್ರಹಿಸುವುದು ಚೀನಾ ಹ್ಯಾಕರ್ಗಳ ಉದ್ದೇಶವಾಗಿತ್ತು ಎಂದೂ ಗುಪ್ತಚರ ವರದಿ ತಿಳಿಸಿದೆ.